ನೌಕರರು ನಿವೃತ್ತಿಯಾದ ಬಳಿಕ ಅಥವಾ ಸೇವೆಯಿಂದ ತೆಗೆದು ಹಾಕಿದ ಸಂದರ್ಭದಲ್ಲಿ ಎಷ್ಟೋ ತಿಂಗಳು, ವರ್ಷ ಕಳೆದರೂ ಅವರಿಗೆ ಸಲ್ಲಬೇಕಾದ ಹಣ ಕೈ ಸೇರುವುದೇ ಇಲ್ಲ. ಆದರೆ, ಹೊಸ ವೇತನ ಸಂಹಿತೆ ಜಾರಿಗೆ ಬರುತ್ತಿದ್ದು, ಆ ಪ್ರಕಾರ ಸೇವೆ ಕೊನೆಗೊಂಡ ಎರಡು ದಿನಗಳಲ್ಲೇ ಅವರ ಅಂತಿಮ ಪರಿಹಾರ ಚುಕ್ತಾ ಮಾಡಲಾಗುತ್ತದೆ.
ಹೊಸ ವೇತನ ಸಂಹಿತೆ ಉದ್ಯೋಗಿಯ ಕೊನೆಯ ಕೆಲಸದ ದಿನದ ಎರಡು ದಿನಗಳಲ್ಲಿ ಬಾಕಿ ವೇತನ ಮತ್ತು ಪೂರ್ಣ ಮತ್ತು ಅಂತಿಮ ವೇತನವನ್ನು ಪಾವತಿಸಲು ಕಂಪನಿಗೆ ನಿರ್ದೇಶಿಸುತ್ತದೆ.
ರಾಜೀನಾಮೆ, ವಜಾ ಅಥವಾ ಉದ್ಯೋಗ ಮತ್ತು ಸೇವೆಗಳಿಂದ ತೆಗೆದುಹಾಕುವ ಸಂದರ್ಭದಲ್ಲಿ ಕಂಪನಿಯು ಎರಡು ದಿನಗಳಲ್ಲಿ ಬಾಕಿ ಪಾವತಿಸಬೇಕಾಗುತ್ತದೆ ಎಂದು ಹೊಸ ನಿಯಮಗಳು ಹೇಳುತ್ತದೆ.
ಪೂರ್ಣ ಮತ್ತು ಅಂತಿಮ ಪರಿಹಾರವನ್ನು ಪ್ರಕ್ರಿಯೆಗೊಳಿಸಲು ಹೆಚ್ಚಿನ ಕಂಪನಿಗಳು ಪ್ರಸ್ತುತ 45 ದಿನಗಳಿಂದ 60 ದಿನಗಳನ್ನು ತೆಗೆದುಕೊಳ್ಳುತ್ತವೆ. ಇದು ಹೆಚ್ಚಿನ ಸಂಸ್ಥೆಗಳು ಅನುಸರಿಸುವ ಸಾಮಾನ್ಯ ಅಭ್ಯಾಸವಾಗಿದೆ. ಇನ್ನು ಮುಂದೆ ಹೀಗೆ ಮಾಡಲು ಆಗದು.
ಹೊಸ ವೇತನ ಸಂಹಿತೆ ಪ್ರಕಾರ “ಒಬ್ಬ ನೌಕರನು ಸೇವೆಯಿಂದ ತೆಗೆದುಹಾಕಲ್ಪಟ್ಟಿದ್ದರೆ ಅಥವಾ ವಜಾಗೊಳಿಸಿದ್ದರೆ, ಸೇವೆಯಿಂದ ವಜಾಗೊಳಿಸಿದ್ದರೆ, ರಾಜೀನಾಮೆ ನೀಡಿದ್ದರೆ ಅಥವಾ ಕಂಪನಿ ಮುಚ್ಚುವಿಕೆಯಿಂದಾಗಿ ನಿರುದ್ಯೋಗಿಯಾಗಿದ್ದರೆ ಅವನಿಗೆ ಪಾವತಿಸಬೇಕಾದ ವೇತನವನ್ನು ಎರಡು ಕೆಲಸದ ದಿನಗಳಲ್ಲಿ ಪಾವತಿಸಬೇಕು.
ಮೋದಿ ಸರ್ಕಾರವು ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದರೆ, ಸಂಬಳ ಪುನರ್ರಚನೆ, ಪಿಎಫ್ ಮತ್ತು ಗ್ರಾಚ್ಯುಟಿ ಅಂಶಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಬಹುದು.
ಪ್ರಸ್ತುತ, 23 ರಾಜ್ಯಗಳು ಈ ಕಾನೂನುಗಳ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿವೆ. ಫೆಬ್ರವರಿ 2021ರಲ್ಲಿ ಈ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರವು ರ್ಪೂಣಗೊಳಿಸಿದೆ.