ಜುಲೈ 1ರಿಂದ ಟಿಡಿಎಸ್ಗೆ ಹೊಸ ನಿಯಮ ಬರುತ್ತಿದೆ. ಇದು ವೈದ್ಯರು ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮೇಲೆ ಪರಿಣಾಮ ಬೀರಲಿದೆ. ಈ ವಿಷಯದಲ್ಲಿ ತಿಳಿದುಕೊಳ್ಳಬೇಕಾದ ಅಂಶಗಳಿವೆ.
ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ವ್ಯಾಪಾರ ಅಥವಾ ವೃತ್ತಿಯಲ್ಲಿ ಪಡೆದ ಪ್ರಯೋಜನಗಳ ಕುರಿತು ಹೊಸ ಟಿಡಿಎಸ್ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಲಾಭವನ್ನು ನಗದು ಅಥವಾ ವಸ್ತು ಅಥವಾ ಭಾಗಶಃ ಈ ಎರಡೂ ರೂಪಗಳಲ್ಲಿರಬಹುದು ಎಂದು ಹೇಳಿದೆ.
2022- 23ರ ಬಜೆಟ್ನಲ್ಲಿ ತೆರಿಗೆ ಆದಾಯ ಸೋರಿಕೆ ಪರಿಶೀಲಿಸಲು ಅಂತಹ ಆದಾಯದ ಮೇಲೆ ಮೂಲದಲ್ಲಿ ತೆರಿಗೆ ಕಡಿತಗೊಳಿಸುವ (ಟಿಡಿಎಸ್) ಕ್ರಮಕೈಗೊಳ್ಳಲಾಗಿದೆ. ಇದು ಯಾವುದೇ ವ್ಯಕ್ತಿಯಿಂದ ಶೇಕಡಾ 10ರ ದರದಲ್ಲಿ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.
1. ವಾರ್ಷಿಕ ರೂ. 20,000 ಮೀರಿದ ಪ್ರಯೋಜನಗಳು ಅಥವಾ ಲಾಭಗಳನ್ನು ಶೇ.10 ರ ದರದಲ್ಲಿ ತೆರಿಗೆ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ. ವ್ಯಾಪಾರ ಅಥವಾ ಮಾರಾಟ ಪ್ರಚಾರ ಚಟುವಟಿಕೆಗಳಿಂದ ಪಡೆದ ಪ್ರಯೋಜನ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ವೈದ್ಯರಿಗೆ ಸಹ ಈ ನಿಬಂಧನೆಯನ್ನು ಅನ್ವಯಿಸಲಾಗುತ್ತದೆ.
2. ಮಾರಾಟ ಪ್ರಚಾರದ ಪ್ರಯತ್ನಗಳಿಂದ ಲಾಭ ಗಳಿಸಿದ ವ್ಯಕ್ತಿಗಳು ತಮ್ಮ ತೆರಿಗೆ ರಿಟರ್ನ್ಸ್ನಲ್ಲಿ ತಮ್ಮ ಲಾಭ ಬಹಿರಂಗಪಡಿಸಬೇಕು. ಲಾಭ ಅಥವಾ ಉತ್ಪನ್ನದ ಮೌಲ್ಯದ ಆಧಾರದ ಮೇಲೆ ತೆರಿಗೆ ಪಾವತಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ವಿಧಾನ ತರಲಾಗಿದೆ.
ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ
3. ವ್ಯಾಪಾರೋದ್ಯಮ ಉದ್ದೇಶಕ್ಕೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಪಡೆದ ಉಚಿತ/ಉತ್ಪನ್ನಗಳನ್ನು ತಾವೇ ಇಟ್ಟುಕೊಂಡರೆ ಟಿಡಿಎಸ್ಗೆ ಜವಾಬ್ದಾರರಾಗಿರುತ್ತಾರೆ. ಸರಕುಗಳನ್ನು ಸಂಸ್ಥೆಗೆ ಹಿಂತಿರುಗಿಸಿದರೆ ಟಿಡಿಎಸ್ ಅನ್ವಯಿಸುವುದಿಲ್ಲ.
4. ವೈದ್ಯರು ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವಾಗ ಔಷಧಿಗಳ ಉಚಿತ ಮಾದರಿ ಪಡೆಯುತ್ತಿದ್ದರೆ ಆಸ್ಪತ್ರೆಯು ಈ ಮಾದರಿಗಳನ್ನು ತೆರಿಗೆಗೆ ಒಳಪಟ್ಟಂತೆ ಪರಿಗಣಿಸಲು ಮತ್ತು ಸೆಕ್ಷನ್ 192 ರ ಪ್ರಕಾರ ತೆರಿಗೆಯನ್ನು ಕಡಿತಗೊಳಿಸಲು ಅಧಿಕಾರವನ್ನು ಹೊಂದಿದೆ.
5. ಮಾರಾಟದ ರಿಯಾಯಿತಿಗಳು, ನಗದು ರಿಯಾಯಿತಿಗಳು ಮತ್ತು ಗ್ರಾಹಕರ ರಿಯಾಯಿತಿಗಳು ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆ ಕಡಿತಕ್ಕೆ ಒಳಪಡುವುದಿಲ್ಲ.