
ಎಲ್. ಭರತ್ ಹಾಗೂ ಧನಂಜಯ್ ನಿರ್ದೇಶಿಸುತ್ತಿರುವ ಹೊಸ ಕಲಾವಿದರನ್ನೊಳಗೊಂಡ ‘ಎಣ್ಣೆ ಪಾರ್ಟಿ’ ಎಂಬ ಚಿತ್ರದ ಟೈಟಲ್ ಪೋಸ್ಟರ್ ಇಂದು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ.
ಕಾಮನ್ ಮ್ಯಾನ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರದೀಪ್ ಕೌದಳ್ಳಿ ಎಂಬುವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಭರತ್ ಚಿತ್ರದ ಪೋಸ್ಟರ್ ಅನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದು, ”ಎಲ್ಲರಿಗೂ ನಮಸ್ಕಾರ ನನ್ನ ಹೊಸ ಪ್ರಾಜೆಕ್ಟ್ ಎಣ್ಣೆ ಪಾರ್ಟಿಯನ್ನು ಹೃತ್ಪೂರ್ವಕವಾಗಿ ಘೋಷಿಸುತ್ತಿದ್ದೇನೆ. ಅಂತಹ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗಿದೆ ನಿಮ್ಮ ಪ್ರೀತಿ ಹಾಗೂ ಬೆಂಬಲ ಬೇಕು ಎಂದು ಬರೆದುಕೊಂಡಿದ್ದಾರೆ.
