ಹೊಸ ಸಿಹಿ ಮಾಡುವ ಪ್ಲಾನ್ ನಲ್ಲಿದ್ದರೆ ಸೇಬು ಜಿಲೇಬಿ ಮಾಡಿ ನೋಡಿ.
ಸೇಬು ಜಿಲೇಬಿ ಮಾಡಲು ಬೇಕಾಗುವ ಪದಾರ್ಥ :
ಸೇಬು – 2
ಮೈದಾ – 3 ಕಪ್
ಸಕ್ಕರೆ – 2 ಚಮಚ
ಎಣ್ಣೆ – 2 ಚಮಚ
ನೀರು – ಒಂದು ಕಪ್
ನಿಂಬೆ ರಸ – ಒಂದು ಚಮಚ
ಏಲಕ್ಕಿ ಪುಡಿ – 1 ಚಮಚ
ಗೋಡಂಬಿ – ಸ್ವಲ್ಪ
ಗುಲಾಬಿ ರಸ ಸ್ವಲ್ಪ
ಸೇಬು ಜಿಲೇಬಿ ಮಾಡುವ ವಿಧಾನ : ಒಂದು ಪಾತ್ರೆಗೆ ನೀರು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇನ್ನೊಂದು ಪಾತ್ರೆಗೆ ಮೈದಾ, ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್ ಮಾಡಿ ಅದಕ್ಕೆ ಸಕ್ಕರೆ ನೀರನ್ನು ಹಾಕಿ ಕಲಸಿ ಪಕ್ಕಕ್ಕಿಡಿ.
ಇನ್ನೊಂದು ಪಾತ್ರೆಗೆ ನೀರು, ಸಕ್ಕರೆ ಹಾಕಿ ಪಾಕ ತಯಾರಿಸಿಕೊಳ್ಳಿ. ಅದಕ್ಕೆ ನಿಂಬೆ ರಸ, ರೋಸ್ ವಾಟರ್, ಏಲಕ್ಕಿ ಪುಡಿಯನ್ನು ಹಾಕಿ ಕುದಿಸಿ, ನಂತ್ರ ಸೇಬು ಹಣ್ಣನ್ನು ತೆಳ್ಳಗೆ ಗುಂಡಗೆ ಕತ್ತರಿಸಿಕೊಳ್ಳಿ. ಕತ್ತರಿಸಿದ ಸೇಬು ಹಣ್ಣಿನ ಸ್ಲೈಸನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಕರಿದ ಸೇಬು ಹಣ್ಣನ್ನು ಸಕ್ಕರೆ ಪಾಕದಲ್ಲಿ ನೆನೆಸಿಡಿ. ರುಚಿ ರುಚಿ ಸೇಬು ಜಿಲೇಬಿ ಸಿದ್ಧ.