alex Certify ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಗಾಳಿಯಲ್ಲಿ ಹಾರಬಲ್ಲ ಜೇಡದ ಕುಟುಂಬದ ಎರಡು ತಳಿಗಳು ಮಹಾರಾಷ್ಟ್ರದ ಥಾಣೆ-ಕಲ್ಯಾಣ್ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಇವುಗಳ ಪೈಕಿ ಒಂದು ತಳಿಗೆ 26/11 ದಾಳಿಯ ಹೀರೋ ತುಕಾರಾಂ ಒಂಬಳೆ ಹೆಸರು ಇಡಲಾಗಿದೆ.

’ಇಸಿಯಸ್ ತುಕಾರಾಮಿ’ ಎಂದು ಈ ತಳಿಯ ಜೇಡಕ್ಕೆ ಹೆಸರಿಡಲಾಗಿದೆ. ಇದೇ ವೇಳೆ ಥಾಣೆಯ ಆರೇ ಕಾಲೋನಿಯಲ್ಲಿ ಸಿಕ್ಕ ಮತ್ತೊಂದು ಜೇಡದ ತಳಿಗೆ ’ಫಿಂಟೆಲ್ಲಾ ಚೋಲ್ಕೇಯ್’ ಎಂದು ಹೆಸರಿಡಲಾಗಿದೆ. ಜೇಡಗಳ ಸಂಶೋಧಕ ಹಾಗೂ ಪರಿಸರವಾದಿ ಕಮ್ಲೇಶ್ ಚೋಕ್ಲೇ ಗೌರವಾರ್ಥ ಈ ಹೆಸರಿಡಲಾಗಿದೆ.

26/11ರ ಮುಂಬಯಿ ಭಯೋತ್ಪಾದಕ ದಾಳಿಯ ವೇಳೆ ಭಯೋತ್ಪಾದಕ ಕಸಬ್‌ನನ್ನು ಬಿಗಿಯಾಗಿ ಹಿಡಿದಿದ್ದ ಎಎಸ್‌ಐ ಒಂಬಳೆ, ಆ ವೇಳೆ ವೈರಿಗಳ ಗುಂಡೇಟಿಗೆ ಹುತಾತ್ಮರಾಗಿದ್ದರು. ಕಸಬ್ ಹಾಗೂ ಆತನ ಸಂಗಡಿಗ ಜೂಹು ಚೌಪಾಟಿ ಬಳಿ ಸ್ಕೋಡಾ ಕಾರೊಂದರಲ್ಲಿ ಬರುತ್ತಿದ್ದ ವೇಳೆ ನಾಕಾಬಂದಿ ಮೂಲಕ ಅಡ್ಡ ಹಾಕಿದ ಪೊಲೀಸರು, ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಂದಿದ್ದರು. ಈ ವೇಳೆ ಕಾರಿನ ಬಳಿ ಹೋಗಿ ಪರಿಶೀಲನೆ ಮಾಡಿದ ಒಂಬಳೆ, ಕಸಬ್ ಜೀವಂತ ಇರುವುದನ್ನು ಕಂಡು ಆತನನ್ನು ಬಿಗಿಯಾಗಿ ಅಪ್ಪಿ ಹಿಡಿಯುವ ಮೂಲಕ ತಮ್ಮ ಸಹೋದ್ಯೋಗಿಗಳಿಗೆ ಎಕೆ-47 ಬಂದೂಕಿನ ಗುಂಡೇಟು ಬೀಳುವುದನ್ನು ತಪ್ಪಿಸಲು, ತಾವು 23 ಗುಂಡುಗಳನ್ನು ತಿಂದು ಹುತಾತ್ಮರಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...