ಕೇರಳ: ಉತ್ತರ ಕೇರಳದ ಕರಾವಳಿ ಕಾಡುಗಳಲ್ಲಿ ನೆಲದ ಮೇಲೆ ವಾಸಿಸುವ ಹೊಸ ಜಾತಿಯ ಸರೀಸೃಪ ಸಿರ್ಟೊಡಾಕ್ಟಿಲಸ್ ನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದನ್ನು ಗೆಕ್ಕೊ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಸಿರ್ಟೊಡಾಕ್ಟಿಲಸ್ (ಗೆಕೊಯೆಲ್ಲಾ) ಚೆಂಗೋಡುಮಾಲೆನ್ಸಿಸ್. ಇದು ಒಂದು ಸಣ್ಣ ಜಾತಿಯ ಸರೀಸೃಪವಾಗಿದ್ದು, ಎಲೆಗಳ ಕಸ ಮತ್ತು ಕಾಡುಗಳಲ್ಲಿನ ಬಂಡೆಗಳ ನಡುವೆ ನೆಲದ ಮೇಲೆ ಕಂಡುಬರುತ್ತದೆ.
ಚೆಂಗೋಡುಮಲ ಅಥವಾ ಕರಾವಳಿ ಕೇರಳದ ಗೆಕ್ಕೊಯೆಲ್ಲಾ ತಗ್ಗು ಬೆಟ್ಟಗಳು ಮತ್ತು ಉತ್ತರ ಕೇರಳದ ಕರಾವಳಿ ಅರಣ್ಯದಲ್ಲಿ ವಾಸಿಸುತ್ತವೆ. ಕೇರಳದ ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಈ ಕೀಟವು ಗರಿಷ್ಠ 120 ಕಿ.ಮೀ. ದೂರವನ್ನು ವ್ಯಾಪಿಸಿರುವ ಬಗ್ಗೆ ಕಂಡುಹಿಡಿಯಲಾಗಿದೆ.
ಚೆಂಗೋಡುಮಲ ಕೋಝಿಕ್ಕೋಡ್ ಜಿಲ್ಲೆಯ ಮಧ್ಯಭಾಗದ ಗುಡ್ಡವಾಗಿದೆ. ಈ ಭಾಗದಲ್ಲಿ ಸಾಕಷ್ಟು ವೈವಿಧ್ಯಮಯ ಕ್ರಿಮಿ ಕೀಟ, ಸರೀಸೃಪಗಳ ತಳಿಗಳಿದ್ದು ಅಕ್ರಮ ಗಣಿಗಾರಿಕೆಯಿಂದ ಅವು ನಾಶದ ಅಂಚಿನಲ್ಲಿವೆ ಎಂದು ಸಂಶೋಧಕರು ಹೇಳಿದ್ದಾರೆ.