ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಹೊಸ ಸಿಲಿಂಡರ್ ಪರಿಚಯಿಸಿದೆ. ಇದಕ್ಕೆ ಕಂಪನಿ ಕಾಂಪೋಸಿಟ್ ಸಿಲಿಂಡರ್ ಎಂದು ಹೆಸರಿಟ್ಟಿದೆ. ಈ ಸಿಲಿಂಡರ್ ವಿಶೇಷವೆಂದ್ರೆ ಇದ್ರಲ್ಲಿ ಎಷ್ಟು ಗ್ಯಾಸ್ ಇದೆ, ಎಷ್ಟು ಖರ್ಚಾಗಿದೆ ಎಂಬುದು ಗೊತ್ತಾಗುತ್ತದೆ. ಇದ್ರ ಲುಕ್ ಜನರನ್ನು ಆಕರ್ಷಿಸಿದ್ದು, ಇದ್ರ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ.
ಕಾಂಪೋಸಿಟ್ ಸಿಲಿಂಡರ್ ಗೆ ಮೂರು ಪದರ ನೀಡಲಾಗಿದೆ. ಇದ್ರ ತೂಕ ಹಳೆ ಸಿಲಿಂಡರ್ ಗಿಂತ ಶೇಕಡಾ 50ರಷ್ಟು ಕಡಿಮೆಯಿರುತ್ತದೆ. ಇದು 5 ಮತ್ತು 10 ಕೆ.ಜಿ ತೂಕದಲ್ಲಿ ಲಭ್ಯವಿದೆ. ಕಡಿಮೆ ಸಿಲಿಂಡರ್ ಬಳಸುವ ಗ್ರಾಹಕರಿಗೆ ಇದು ಬೆಸ್ಟ್. ಈ ಸಿಲಿಂಡರ್ ಬಾಡಿ ಟ್ರಾನ್ಸ್ಫರೆಂಟ್ ಆಗಿದೆ. ಹೊರಗಿನಿಂದಲೇ ಗ್ಯಾಸ್ ಎಷ್ಟಿದೆ ಎಂಬುದನ್ನು ಪತ್ತೆ ಮಾಡಬಹುದು. ತುಕ್ಕು ಮುಕ್ತವಾಗಿದೆ ಯಾವುದೇ ಹಾನಿಯಾಗಲ್ಲ. ಹಾಗೆ ನೆಲ ಕೊಳಕಾಗುವುದಿಲ್ಲ.
ಪ್ರಸ್ತುತ ಈ ಸಿಲಿಂಡರ್‌ಗಳು 5 ಕೆಜಿ ಮತ್ತು 10 ಕೆಜಿಯಲ್ಲಿ ಲಭ್ಯವಿದೆ. ನವದೆಹಲಿ, ಗುರಗಾಂವ್, ಹೈದರಾಬಾದ್, ಫರೀದಾಬಾದ್ ಮತ್ತು ಲುಧಿಯಾನದಲ್ಲಿ ಆಯ್ದ ವಿತರಕರಿಗೆ ಲಭ್ಯವಿದೆ. ಇಂಡೇನ್ ಗ್ಯಾಸ್ ಗ್ರಾಹಕರು, ಹತ್ತಿರದ ವಿತರಕರನ್ನು ಸಂಪರ್ಕಿಸಬಹುದು.