ಉದ್ಯಾನವನಗಳ ಪ್ರವೇಶ ಸಮಯದಲ್ಲಿ ಬದಲಾವಣೆ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಉದ್ಯಾನಗಳ ಬಳಕೆ ಸಮಯ ಹೆಚ್ಚಾಗಿರುವ ಬಗ್ಗೆ ಹೆಚ್ಚಿನ ಜನರು ಖುಷಿಪಟ್ಟಿದ್ದಾರಾದರೂ, ಪಾರ್ಕ್ನಲ್ಲಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶೌಚಾಲಯ ಮತ್ತು ಕುಡಿಯುವ ನೀರಿನಂತಹ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯಾನದ ವಿಷಯದಲ್ಲಿ ಬಿಬಿಎಂಪಿ ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಅಭಿಪ್ರಾಯಗಳು ಬಂದಿವೆ. ಸಮಯವನ್ನು ವಿಸ್ತರಿಸಿರುವುದರಿಂದ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸೌಲಭ್ಯಗಳು ಉತ್ತಮ ಸ್ಥಿತಿಯಲ್ಲಿಲ್ಲ. ಸಿಸಿ ಟಿವಿ ಇಲ್ಲ, ಶೌಚಾಲಯವೂ ಸ್ವಚ್ಛವಾಗಿಲ್ಲ ಎಂದು ವಾಕರ್ಗಳು ಅಭಿಪ್ರಾಯ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,118 ಉದ್ಯಾನಗಳಿದ್ದು, ಉದ್ಯಾನವನಗಳ ನಿರ್ವಹಣೆಗೆ ಒಂದು ವರ್ಷದ ಅಂದಾಜು ವೆಚ್ಚ ಆರರಿಂದ ಏಳು ಕೋಟಿ ರೂ.ಗಳಾಗುತ್ತವೆ. ವಸತಿ ಪ್ರದೇಶಗಳಲ್ಲಿ ಸಿಸಿ ಟಿವಿಗಳ ಅಗತ್ಯವಿಲ್ಲ. ದೂರದ ಪ್ರದೇಶಗಳಲ್ಲಿ ಇರುವ ಉದ್ಯಾನವನಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.