ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿ ಶುರು ಮಾಡಿವೆ. ಅಲ್ಲದೆ ಅನೇಕ ಕಂಪನಿಗಳು ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ತರ್ತಿವೆ.
ಎಲೆಕ್ಟ್ರಿಕ್ ವಾಹನ ತಯಾರಕ ಓಕಿನಾವಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಓಖಿ 90 ಅನ್ನು ಮಾರ್ಚ್ 24, 2022 ರಂದು ಬಿಡುಗಡೆ ಮಾಡಲಿದೆ. ಓಖಿ 90, ಕಂಪನಿಯ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ಓಖಿ 90 ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿರುವ ಸ್ಕೂಟರ್, ವೇಗ, ಶ್ರೇಣಿ, ಬ್ಯಾಟರಿ ಚಾರ್ಜ್ ಇತ್ಯಾದಿ ಮಾಹಿತಿಯನ್ನು ತೋರಿಸುತ್ತದೆ. ಸ್ಕೂಟರ್ ಇ-ಸಿಮ್ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಸಂಪರ್ಕ ಹೊಂದಿದ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ. ಇದು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಅಲರ್ಟ್, ಜಿಯೋ-ಫೆನ್ಸಿಂಗ್, ಇ-ಕಾಲ್, ಡಯಾಗ್ನೋಸ್ಟಿಕ್ಸ್, ರೈಡ್ ಬಿಹೇವಿಯರ್ ಅನಾಲಿಸಿಸ್ ಮುಂತಾದ ವೈಶಿಷ್ಟ್ಯ ಹೊಂದಿದೆ.
ಓಕಿನಾವಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಇದು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. 80 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎನ್ನಲಾಗ್ತಿದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಸುಮಾರು 150 ಕಿ.ಮೀ ದೂರದವರೆಗೆ ಓಡಬಲ್ಲದು ಎನ್ನಲಾಗ್ತಿದೆ. ಓಲಾ ಎಸ್ 1, ಬಜಾಜ್ ಚೇತಕ್ ಗೆ ಇದು ಸ್ಪರ್ಧೆಯೊಡ್ಡಲಿದೆ.