ಕೊರೋನಾ ಮೂರನೇ ಅಲೆ ಆತಂಕದ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಂದಿದೆ. ದಕ್ಷಿಣ ಆಫ್ರಿಕಾ ಮತ್ತು ಅನೇಕ ದೇಶಗಳಲ್ಲಿ ಕೊರೋನಾ ವೈರಸ್ ಹೊಸ ರೂಪಾಂತತಿ ತಳಿ ಪತ್ತೆಯಾಗಿದೆ.
ತಳಿ ರೂಪಾಂತರ ಮತ್ತು ಹರಡುವಿಕೆಯ ವೇಗ ಎರಡುಪಟ್ಟು ಹೆಚ್ಚಾಗಿರುವ ಈ ತಳಿ ಈಗಿರುವ ಯಾವ ಲಸಿಕೆಗಳಿಗೂ ನಿಲುಕುತ್ತಿಲ್ಲ. ಈ ಹೊಸ ತಳಿ ವಿರುದ್ಧ ಈಗಿರುವ ಯಾವುದೇ ಲಸಿಕೆಯೂ ರಕ್ಷಣೆ ನೀಡುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ಕೊರೋನಾ ವೈರಸ್ ಸಿ.1.2 ಹೆಸರಿನ ಈ ತಳಿ ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ, ಕುಝುಲು ನ್ಯಾಟಲ್ ರೀಸರ್ಚ್ ಇನ್ನೋವೇಷನ್ಅಂಡ್ ಸೀಕ್ವೆನ್ಸ್ ಪ್ಲಾಟ್ ಫಾರ್ಮ್ ತಿಳಿಸಿದೆ.
ದಕ್ಷಿಣ ಆಫ್ರಿಕಾ ಡೆಮಾಕ್ರಟಿಕ್ ರಿಪಬ್ಲಿಕ್ ಅಫ್ ಕಾಂಗೋ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಚೀನಾ, ಪೋರ್ಚುಗಲ್, ಸ್ವಿಟ್ಜರ್ ಲೆಂಡ್ ನಲ್ಲಿ ಈ ರೂಪಾಂತರ ತಳಿ ಕಂಡುಬಂದಿದ್ದು, ಈಗ ಇರುವ ಯಾವುದೇ ಲಸಿಕೆಯು ಇದರ ವಿರುದ್ಧ ಪರಿಣಾಮಕಾರಿಯಾಗಿಲ್ಲ, ರಕ್ಷಣೆ ನೀಡುವುದಿಲ್ಲ ಎಂದು ಹೇಳಲಾಗಿದೆ.
ರೂಪಾಂತರಿ ತಳಿಯ ವೇಗ ಎರಡುಪಟ್ಟು ಹೆಚ್ಚಾಗಿದೆ. ಒಂದು ವರ್ಷದಲ್ಲಿ 41 ಕ್ಕೂ ಅಧಿಕ ಸಲ ಈ ವೈರಸ್ ರೂಪಾಂತರಗೊಂಡಿದೆ ಎನ್ನಲಾಗಿದೆ.