alex Certify ಕೊರೊನಾಗೆ ತುತ್ತಾಗಿ 549 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರೋಗಿ ಕೊನೆಗೂ ಡಿಸ್ಚಾರ್ಜ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾಗೆ ತುತ್ತಾಗಿ 549 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರೋಗಿ ಕೊನೆಗೂ ಡಿಸ್ಚಾರ್ಜ್….!

ಕೊರೋನಾ ವೈರಸ್ ಸಾಂಕ್ರಾಮಿಕ ಕಾಯಿಲೆಯಾದರೂ, ಇದಕ್ಕೆ ತುತ್ತಾದ ರೋಗಿಗಳು ಅಬ್ಬಬ್ಬಾ ಅಂದ್ರೆ ಒಂದು ತಿಂಗಳುಗಳ ಕಾಲ ಚಿಕಿತ್ಸೆ ಪಡೆಯುತ್ತಾರೆ.

ಅಷ್ಟಕ್ಕೂ ಒಂದು ತಿಂಗಳು ಸಹ ಹೆಚ್ಚೇ, ಏಕೆಂದರೆ ಸಾಮಾನ್ಯವಾಗಿ ಒಂದೆರಡು ವಾರಗಳಲ್ಲಿ ರೋಗಿಗಳು ಡಿಸ್ಚಾರ್ಜ್ ಆಗುತ್ತಾರೆ. ಆದ್ರೆ ಇಲ್ಲೊಬ್ಬ ಕೋವಿಡ್ ಗೆ ತುತ್ತಾಗಿದ್ದವ, ಬರೋಬ್ಬರಿ 549 ದಿನಗಳ ಕಾಲ ಆಸ್ಪತ್ರೆಯಲ್ಲೆ ಬಂಧಿಯಾಗಿದ್ದ.

BIG NEWS: ವಿಪಕ್ಷವನ್ನು ಜನರು ಧೂಳಿಪಟ ಮಾಡಿದ್ದಾರೆ: ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದ ಸಿಎಂ ಬೊಮ್ಮಾಯಿ

ಅಮೇರಿಕದ ಡೊನೆಲ್ ಹಂಟರ್ ಎನ್ನುವ 43 ವರ್ಷದ ವ್ಯಕ್ತಿ 2020ರ ಸೆಪ್ಟೆಂಬರ್‌ ತಿಂಗಳಿನಿಂದ ಇತ್ತೀಚಿನವರೆಗು ಅಂದರೆ ಮಾರ್ಚ್ ನಾಲ್ಕನೇ ತಾರೀಖಿನವರೆಗೂ ಆಸ್ಪತ್ರೆಯಲ್ಲಿಯೆ ಇದ್ದರು. 2020ರಲ್ಲಿ ಕೊರೋನಾ ಕಾಯಿಲೆಗೆ ತುತ್ತಾದ ಇವರು, ಮೊದಲು ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗಿ ಮನೆಗೆ ವಾಪಸ್ಸಾದರು. ಅದರ ನಂತರ ಡೊನೆಲ್ ಅವರ ಉಸಿರಾಟದಲ್ಲಿ ಏರುಪೇರಾಗತೊಡಗಿತು. ಆಗ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು, ಅಂದಿನಿಂದ 2022ರ ಮಾರ್ಚ್ 4ನೇ ತಾರೀಖಿನವರೆಗು ಡೊನೆಲ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪತ್ನಿ ಆಶ್ಲೀ ಹಂಟರ್ ತಿಳಿಸಿದ್ದಾರೆ.

BIG BREAKING: ಗೋವಾದಲ್ಲಿ ಸುಗಮವಾಯ್ತು BJP ಸರ್ಕಾರ ರಚನೆ ದಾರಿ

ಈ ಹಿಂದೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಡೊನೆಲ್ ಅವರು, ಹದಿನೈದು ವರ್ಷಗಳ ಕಾಲ ಡಯಾಲಿಸಿಸ್ಗೆ ಒಳಗಾಗಿದ್ದರು. 2015 ರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಈ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿದ್ದ ಅಷ್ಟು ದಿನ ವೆಂಟಿಲೇಟರ್ ಹಾಸಿಗೆಯಲ್ಲಿಯೇ ಇದ್ದರು. ಈ 549 ದಿನಗಳ ಕಷ್ಟಕರ ಪಯಣದಲ್ಲಿ ಅರಿಜೋನಾ ಹಾಗೇ ಹೊಸ ಮೆಕ್ಸಿಕೊ ರಾಜ್ಯಗಳ ಒಂಭತ್ತು ಆಸ್ಪತ್ರೆಗಳಲ್ಲಿ ಡೊನೆಲ್ ಚಿಕಿತ್ಸೆ ಪಡೆದಿದ್ದಾರೆ‌ ಎಂದು ಆಶ್ಲೀ ವಿವರಿಸಿದ್ದಾರೆ.

ಅಂತೂ ಕೊರೋನಾ ವಿರುದ್ಧ, ಒಂದು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆಸಿ ಡೊನೆಲ್ ಸಂಪೂರ್ಣ ಗುಣಮುಖರಾಗಿ‌ ಮನೆಗೆ ಮರಳಿದ್ದಾರೆ. ಅವರ ಪುನರಾಗಮನದಿಂದ ಆತನ ಕುಟುಂಬ ಹಾಗೂ ಸ್ನೇಹಿತರು ಸಂತಸ ಗಗನಚುಂಬಿಸಿದೆ. ಎಲ್ಲರೂ ಸೇರಿಕೊಂಡು ಅವರಿಗಾಗಿ ವಿಶೇಷ ಪಾರ್ಟಿಯನ್ನು ಕೂಡ ನೀಡಿದ್ದಾರೆಂದು ಸಿಎನ್ಎನ್ ವರದಿ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...