ದೇಶದ ಅಗ್ರಮಾನ್ಯ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಅತ್ಯಂತ ಜನಪ್ರಿಯ ವಿಟಾರ ಬ್ರಿಜಾ ಕಾರನ್ನು ಮಾರ್ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಈ ಹಿಂದಿನ ವಿಟಾರ ಬ್ರಿಜಾಗಿಂತ ವಿಭಿನ್ನವಾಗಿ ಕಾಣಿಸಲಿರುವ ಹೊಸ ವಿಟಾರ ಬ್ರಿಜಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂದೇ ಭಾವಿಸಲಾಗಿದೆ. ಹೊಸ ವಿನ್ಯಾಸದ ಈ ಕಾರಿನ ಇಮೇಜ್ ಗಳು ಬಹಿರಂಗಗೊಂಡಿದ್ದು, ಹೊಸ ಜನರೇಶನ್ ಗೆ ಹೇಳಿ ಮಾಡಿಸಿದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ವಾಹನದ ಬಾಡಿ ಪ್ಯಾನೆಲ್ ಗಳೆಲ್ಲವನ್ನೂ ಹೊಸ ರೂಪದಲ್ಲಿ ಬದಲಾಯಿಸಲಾಗಿದ್ದು, ಗ್ಲಾಸ್ ಹೌಸ್ ಸಹ ಬದಲಾಗಿದೆ. ಬ್ಯಾನೆಟ್, ಬಂಪರ್ಸ್ ಮತ್ತು ಲೈಟ್ ಕ್ಲಸ್ಟರ್ ಗಳು ಮತ್ತು ಟೇಲ್ ಗೇಟ್ ಸಹ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.
BIG NEWS: ರಾಜ್ಯಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಗೆಲುವು; ಅಧಿಕೃತ ಘೋಷಣೆಯೊಂದೇ ಬಾಕಿ
ಇತ್ತೀಚೆಗೆ ಬಿಡುಗಡೆಯಾಗಿರುವ ಇಮೇಜ್ ಗಳಲ್ಲಿ ಡ್ಯಾಶ್ ಬೋರ್ಡ್ ವಿನ್ಯಾಸದಲ್ಲಿ ಆಗಿರುವ ಬದಲಾವಣೆಯು ಎದ್ದು ಕಾಣುತ್ತದೆ. ಇದರಲ್ಲಿನ ಟಚ್ ಸ್ಕ್ರೀನ್ ಇದೀಗ ದೊಡ್ಡದಾಗಿರಲಿದ್ದು, ಸ್ಮಾರ್ಟ್ ಪ್ರೊ ಸಿಸ್ಟಂ ಇರಲಿದೆ.
ಸ್ಟೇರಿಂಗ್ ಹೊಚ್ಚ ಹೊಸ ರೂಪದಲ್ಲಿದ್ದರೆ, ಏರ್ ಕಾನ್ ಕಂಟ್ರೋಲ್ ಗಳು ಹೊಸದಾಗಿವೆ. ಇದೇ ರೀತಿಯ ಸ್ವಿಚ್ ಗಳನ್ನು ಮಾರುತಿ ಬಲೇನೋದಲ್ಲಿ ಅಳವಡಿಸಲಾಗುತ್ತಿದೆ.
ಹೊಸ ವಿಟಾರ ಬ್ರಿಜಾದ ಟಾಪ್ ವೇರಿಯೆಂಟ್ ಗಳಲ್ಲಿ ಆಟೋ ಕ್ಲೈಮೇಟ್ ಕಂಟ್ರೋಲ್, ಸನ್ ರೂಫ್, ಕ್ರೂಸ್ ಕಂಟ್ರೋಲ್. ಪೆಡಲ್ ಶಿಫ್ಟರ್ ಗಳು ಹೊಸ ಮಾದರಿಯಲ್ಲಿರಲಿವೆ.