ಭಾರತದಲ್ಲಿ ಬಿಡುಗಡೆ ಮಾಡಲೆಂದು ಹೊಸ ಕಾರುಗಳ ಮೇಲೆ ಕೆಲಸ ಮಾಡುತ್ತಿರುವ ಮಾರುತಿ ಸುಜ಼ುಕಿ ತನ್ನ ಎರ್ಟಿಗಾ 2022 ಕಾರಿಗೆ ಮರುವಿನ್ಯಾಸ ನೀಡಲು ಮುಂದಾಗಿದೆ.
ಮಧ್ಯಾಯುಷ್ಯದ ಮಾರ್ಪಾಡಿಗೆ ಒಳಗಾಗಲಿರುವ ಈ ಎಂಪಿವಿ ತನ್ನ ಹೊಸ ಅವತಾರದಲ್ಲಿ ಮುಂದಿನ ವರ್ಷ ಲಾಂಚ್ ಆಗಲಿದೆ. 2022 ಎರ್ಟಿಗಾ ಇತ್ತೀಚೆಗೆ ಪ್ರಯೋಗಾರ್ಥ ಪರೀಕ್ಷೆಗೂ ಒಳಪಟ್ಟಿದೆ. ಇದೇ ಕೆಲಸವನ್ನು ತನ್ನ ಎಕ್ಸ್‌ಎಲ್6ಗೂ ಮಾಡುತ್ತಿದೆ ಮಾರುತಿ ಸುಜ಼ುಕಿ.
BIG NEWS: ಸೋಂಕು ಹೆಚ್ಚಾದರೆ ಶಾಲೆ ಬಂದ್ ಮಾಡಲು ಸರ್ಕಾರ ಸಿದ್ಧ; ಸಚಿವ ನಾಗೇಶ್
ಹೇಳಬೇಕೆಂದರೆ ಎರ್ಟಿಗಾದ ಲುಕ್ಸ್ ಹೊರತುಪಡಿಸಿ ಬೇರಾವ ದೊಡ್ಡ ಬದಲಾವಣೆಯನ್ನೂ ಮಾಡಲಾಗುತ್ತಿಲ್ಲ. ಹಿಂದಿನ ವರ್ಶನ್‌ಗೆ ಹೋಲಿಸಿದಲ್ಲಿ ಬದಲಾವಣೆಯಾಗುತ್ತಿರುವ ಒಂದೇ ಒಂದು ಭಾಗವೆಂದರೆ ಅದು ಗ್ರಿಲ್ ಮಾತ್ರ. ಮಿಕ್ಕಂತೆ ಎರ್ಟಿಗಾದ ಹೆಡ್‌ಲೈಟ್‌ಗಳು, ಬಂಪರ್‌ಗಳು, ಬಹುಲೋಹದ ಚಕ್ರಗಳು ಹಾಗೂ ಟೇಲ್ ಲ್ಯಾಂಪ್‌ಗಳು ಹಾಗೇ ಉಳಿದುಕೊಳ್ಳಲಿವೆ.
ಕ್ಯಾಬಿನ್‌ಗೂ ಹೇಳಿಕೊಳ್ಳುವಂಥ ಬದಲಾವಣೆಗಳನ್ನು ಎರ್ಟಿಗಾ ತರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಒಟ್ಟಾರೆಯಾಗಿ, ಏಳು ಸೀಟರ್ ಕಾರಿನ ಅವತಾರದಲ್ಲೇನೂ ಗುರುತರ ಬದಲಾವಣೆಗಳು ಆಗೋದಿಲ್ಲ ಎಂದೇ ಹೇಳಬಹುದು.