ಬೈಕಿಂಗ್ ದಿಗ್ಗಜ ಕೆಟಿಎಂ ತನ್ನ ಹೊಸ ತಲೆಮಾರಿನ ಆರ್‌ಸಿ 125 ಹಾಗೂ ಆರ್‌ಸಿ 200 ಬೈಕ್ ಗಳನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ ಆರ್‌ಸಿ 390 ಭಾರತದಲ್ಲಿ ಇನ್ನೂ ಮಾರಾಟಕ್ಕೆ ಬಂದಿಲ್ಲ. ಆರ್‌ಸಿ 125 ಹಾಗೂ ಆರ್‌ಸಿ 200ಗಳ ಜೊತೆಯಲ್ಲೇ ಜಾಗತಿಕ ಮಾರುಕಟ್ಟಯಲ್ಲಿ ಆರ್‌ಸಿ 390ಯನ್ನು ಬಿಡುಗಡೆ ಮಾಡಿದ್ದರೂ ಸಹ ಆರ್‌ಸಿ 390 ಭಾರತದಲ್ಲಿ ಇನ್ನೂ ಬಂದಿಲ್ಲ.
ಆದರೆ ಈ ಕಾಯುವಿಕೆಗೆ ತೆರೆ ಎಳೆದಿರುವ ಆಸ್ಟ್ರಿಯಾದ ಕಂಪನಿ ತನ್ನ ಫ್ಲಾಗ್‌ಶಿಪ್ ಬೈಕನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಹೊಸ ಬೈಕ್‌ನ ಝಲಕ್‌ಗಳ ಮೂಲಕ ಯುವಸಮುದಾಯವನ್ನು ಕಾಡಿಸುತ್ತಿದೆ ಕೆಟಿಎಂ. ಆರ್‌ಸಿ 390 ಬೈಕಿನ ಬೆಲೆ ಭಾರತದಲ್ಲಿ ಎಷ್ಟಾಗಲಿದೆ ಎಂದು ಶೀಘ್ರವೇ ಘೋಷಿಸಲಾಗುವುದು.
ಮದ್ಯ ಪ್ರಿಯರಿಗೆ ಮುಖ್ಯ ಮಾಹಿತಿ: 2 ದಿನ ಮದ್ಯ ಮಾರಾಟ ನಿಷೇಧ
ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಆರ್‌ಸಿ 390ಯಲ್ಲಿ ಹಿಂದಿನ ವರ್ಶನ್‌ಗಿಂತ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಅವಳಿ ಹೆಡ್‌ಲ್ಯಾಂಪ್ ಸೆಟಪ್ ಬದಲಿಗೆ ಪಂಚಭುಜದ ಎಲ್‌ಇಡಿ ಹೆಡ್‌ಲ್ಯಾಂಪ್ ಕೊಟ್ಟು, ಬೈಕ್‌ಗೆ ಮೋಟೋಜಿಪಿ ರೇಸ್ ಮಶೀನ್‌ನ ಲುಕ್ ಕೊಟ್ಟಿದೆ ಕೆಟಿಎಂ. ಗಾಳಿ ಹಾಗೂ ತಾಪಮಾನದಿಂದ ರಕ್ಷಣೆ ಹಾಗೂ ಸುಧಾರಿತವಾದ ಉಷ್ಣ ನಿರ್ವಹಣೆಯನ್ನೂ ಸಹ ಕೆಟಿಎಂ ನೀಡಿದೆ. ಇನ್ನಷ್ಟು ಹಗುರ ಚಕ್ರಗಳು ಹಾಗೂ ಫ್ರೇಂಗಳ ಕಾರಣದಿಂದ ಹೊಸ ಆರ್‌ಸಿ 390 ಬೈಕ್ ಮತ್ತಷ್ಟು ಹಗುರವಾಗಿದೆ.
ಈ ಬೈಕ್‌ನಲ್ಲಿ 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಇಂಜಿನ್ ಇದ್ದು, 43 ಬಿಎಚ್‌ಪಿ ಹಾಗೂ 37 ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಸಾಮರ್ಥ್ಯ ಹೊಂದಿದೆ. ಈ ಪವರ್‌ಪ್ಲಾಂಟ್‌ಗೆ ಆರು ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸ್ಲಿಪ್ಪರ್ ಕ್ಲಚ್ ಮತ್ತು ಐಚ್ಛಿಕ ದ್ವಿ-ದಿಕ್ಕಿನ ಕ್ವಿಕ್‌ಶಿಫ್ಟರ್ ಜೊತೆಗೆ ಕೊಡಲಾಗಿದೆ.