ಭಾರತದಲ್ಲಿ ಕಿಯಾ ಮೋಟರ್ಸ್‌ನಿಂದ ಮೊದಲ ಬಾರಿಗೆ ಲಾಂಚ್ ಆದ ವಾಹನ ಸೆಲ್ಟೋಸ್. ಭಾರತದ ಮಾರುಕಟ್ಟೆಯಲ್ಲಿ ಭಾರೀ ಸ್ವೀಕೃತವಾಗಿರುವ ಈ ಕಾರು ಕಿಯಾಗೆ ಅತ್ಯಂತ ಮಹತ್ವದ ವಾಹನವೂ ಆಗಿದೆ. ಸೆಲ್ಟೋಸ್‌ನ ಯಶಸ್ಸಿನ ಕಾರಣದಿಂದಾಗಿಯೇ ಕಿಯಾ ಇಂದು ಭಾರತದ ಅಗ್ರ 5 ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ.
ಇದೀಗ ಸೆಲ್ಟೋಸ್‌ಗೆ ಒಂದಷ್ಟು ಮಾರ್ಪಾಡುಗಳನ್ನು ಮಾಡಿ ಬಿಡುಗಡೆ ಮಾಡಿದೆ ಕಿಯಾ. 2023 ಕಿಯಾ ಸೆಲ್ಟೋಸ್‌ನಲ್ಲಿ ಒಂದಷ್ಟು ಆಸಕ್ತಿಕರ ಮಾರ್ಪಾಡುಗಳನ್ನು ಮಾಡಲಾಗಿದೆ.
ಅವಳಿ ಎಕ್ಸಾಸ್ಟ್‌ಗಳು, ಭಿನ್ನವಾದ ಟೇಲ್ ಲೈಟ್‌ಗಳು ಹಾಗೂ ಸೀಕ್ವೆನ್ಶಿಯಲ್ ಇಂಡಿಕೇಟರ್‌ಗಳು 2023 ಸೆಲ್ಟೋಸ್‌ಗೆ ಪ್ರೀಮಿಯಂ ಲುಕ್ ಕೊಡುತ್ತಿವೆ. ಸೆಲ್ಟೋಸ್‌ನ ಎಕ್ಸ್ ಲೈನ್ ಹಾಗೂ ಜಿಟಿ ಲೈನ್ ಅವತರಣಿಕೆಗಳಿಗೆ ಈ ಹೊಸ ಮಾರ್ಪಾಡುಗಳನ್ನು ಕಿಯಾ ಮೀಸಲಿರಿಸುವ ಸಾಧ್ಯತೆ ಇದೆ.
113 ಬಿಎಚ್‌ಪಿ ಹಾಗೂ 144 ಎನ್‌ಎಂನೊಂದಿಗೆ ಎನ್‌ಎ 1.5 ಲೀ ಪೆಟ್ರೋಲ್ ಮತ್ತು 113 ಬಿಚ್‌ಪಿ ಹಾಗೂ 250 ಎನ್‌ಎಂ ಡೀಸೆಲ್ ಇಂಜಿನ್, ಅಲ್ಲದೇ 158 ಬಿಎಚ್‌ಪಿ ಮತ್ತು 253 ಎನ್‌ಎಂನೊಂದಿಗೆ 1.5 ಲೀ ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಸೆಲ್ಟೋಸ್ ಬರಲಿದೆ. 6-ಸ್ಪೀಡ್ ಎಟಿ, ಐವಿಟಿ, 6-ಸ್ಪೀಡ್ ಎಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್‌ಗಳ ಆಯ್ಕೆಗಳನ್ನು ಸಹ ಸೆಲ್ಟೋಸ್ ನೀಡಲಿದೆ. ಹಬ್ಬದ ಮಾಸವೊಂದರಲ್ಲಿ ಸೆಲ್ಟೋಸ್‌ನ ಬಿಡುಗಡೆಯ ಸಾಧ್ಯತೆ ಇದೆ.
ಸೆಲ್ಟೋಸ್‌ನ ಸುಧಾರಿತ ಮಾಡೆಲ್‌ಗಳ ಬೆಲೆಗಳು 10 ಲಕ್ಷ ರೂ.ನಿಂದ 19 ಲಕ್ಷ ರೂ.ಗಳ (ಎಕ್ಸ್ ಶೋರೂಂ) ವ್ಯಾಪ್ತಿಯಲ್ಲಿರುವ ಸಾಧ್ಯತೆ ಇದೆ.