ಬೆಂಗಳೂರು : ನೇಮಕಾತಿ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸುವ ಹಿನ್ನೆಲೆ ಕೆಪಿಎಸ್ ಸಿ ಕರ್ನಾಟಕ ಲೋಕಸೇವಾ ಆಯೋಗ ಕಾಗದ ರಹಿತ ಪರೀಕ್ಷೆ ನಡೆಸಲು ಮುಂದಾಗಿದೆ .
ಹೌದು, ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಅಳವಡಿಸಿಕೊಂಡು ಕಾಗದರಹಿತ ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ.
ಈಗಿನ ಪರೀಕ್ಷೆ ಪದ್ದತಿಯಲ್ಲಿ ಒಎಂಆರ್ ಗಳ ಶೀಟ್ ಬಳಕೆ, ಮುದ್ರಣ, ಸ್ಕ್ಯಾನಿಂಗ್ ಸೇರಿದಂತೆ ಅನೇಕ ಕೆಲಸಗಳು ಆಗುತ್ತಿದೆ. ಆದ್ದರಿಂದ ಈ ಕೆಲಸಗಳನ್ನು ಕಡಿಮೆ ಮಾಡಲು ಸಿಬಿಟಿ ಅಳವಡಿಕೆ ಮಾಡಲು ಆಯೋಗ ನಿರ್ಧರಿಸಿದೆ. ಒಂದು ಸಾಫ್ಟ್ ವೇರ್ ಬಳಸಿಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಬಹು ಆಯ್ಕೆಯ ಪ್ರಶ್ನೆಗಳಿಗೆ ಕಾಗದದಲ್ಲಿ ಪೆನ್ ನಿಂದ ಸರಿ ಉತ್ತರ ಟಿಕ್ ಮಾಡುವಂತೆ ಕಂಪ್ಯೂಟರ್ ನಲ್ಲಿ ಕ್ಲಿಕ್ ಮೂಲಕ ಉತ್ತರ ಟಿಕ್ ಮಾಡಿ ಸಬ್ಮಿಟ್ ಮಾಡಬೇಕಾಗುತ್ತದೆ. ನೇಮಕಾತಿ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸುವ ಹಿನ್ನೆಲೆ ಕೆಪಿಎಸ್ ಸಿ ಕರ್ನಾಟಕ ಲೋಕಸೇವಾ ಆಯೋಗ ಕಾಗದ ರಹಿತ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದಕ್ಕೂ ಮುನ್ನ ಅಭ್ಯರ್ಥಿಗಳಿಗೆ ಅಣಕು ಪರೀಕ್ಷೆ ನಡೆಸಲಿದೆ ಎನ್ನಲಾಗಿದೆ.