
ನವದೆಹಲಿ: 2024- 25 ನೇ ಸಾಲಿನ 3 ರಿಂದ 6ನೇ ತರಗತಿ ಪಠ್ಯಕ್ರಮ ಬದಲಾವಣೆಗೆ ಸಂಬಂಧಿಸಿದಂತೆ ಬರುವ ಶೈಕ್ಷಣಿಕ ವರ್ಷವೇ ಜಾರಿಗೆ ಆದೇಶ ನೀಡಲಾಗಿದೆ.
ಶೀಘ್ರವೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಸಂಸ್ಥೆ(NCERT) ಪಠ್ಯ ಬಿಡುಗಡೆ ಮಾಡಲಿದೆ. ಈ ನಾಲ್ಕು ತರಗತಿಗಳನ್ನು ಹೊರತುಪಡಿಸಿ ಮಿಕ್ಕ ಯಾವ ತರಗತಿಗಳ ಪಠ್ಯಕ್ರಮದಲ್ಲಿ ಬದಲಾವಣೆ ಇರುವುದಿಲ್ಲ ಎಂದು ಸಿಬಿಎಸ್ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಠ್ಯಕ್ರಮ ಬದಲಾದ ಮೂರರಿಂದ ಆರನೇ ತರಗತಿವರೆಗೆ ಬ್ರಿಜ್ ಕೋರ್ಸ್ ನಡೆಸಲಾಗುವುದು. ಪಠ್ಯಪುಸ್ತಕಗಳ ರವಾನೆ ಶೀಘ್ರವೇ ಆರಂಭವಾಗಲಿದೆ. ಶಿಕ್ಷಕರು ಹೊಸ ಪಠ್ಯ ಬೋಧಿಸಬೇಕು ಎಂದು ಹೇಳಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಡಿಯಲ್ಲಿ ಪಠ್ಯಕ್ರಮ ಬದಲಾವಣೆಗೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು.