ದೇಶದಲ್ಲಿ ಹೊಸ ಕೋವಿಡ್-19 ರೂಪಾಂತರ ಪತ್ತೆಯಾದಾಗಿನಿಂದ, ಜೂನ್ ಮತ್ತು ಜುಲೈನಲ್ಲಿ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಿಲ್ಲದೆ ಎರಡು ತಿಂಗಳುಗಳು ಕಳೆದಿವೆ. ಇದು ಹೊಸ ಕೋವಿಡ್ -19 ಉಪ ವೇರಿಯಂಟ್ EG 5.1 ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ ಎಂದು ಸೂಚಿಸುತ್ತದೆ ಅಂತಾ ತಜ್ಞರು ತಿಳಿಸಿದ್ದಾರೆ.
ಆದರೂ, ಕೋವಿಡ್ ಹೊಸ ರೂಪಾಂತರದ ಬಗ್ಗೆ ನಾವು ಜಾಗರೂಕರಾಗಿರುವುದು ಮುಖ್ಯವಾಗಿದೆ ಎಂದು ಪುಣೆಯ ಬಿ ಜೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ರಾಜೇಶ್ ಕಾರ್ಯಕಾರ್ಟೆ ಹೇಳಿದರು.
SARS-CoV-2 ರೂಪಾಂತರ EG.5.1 ಓಮಿಕ್ರಾನ್ ರೂಪಾಂತರ XBB.1.9.2 ನ ಉಪ ತಳಿಯಾಗಿದೆ. ಅದರ ಮೂಲ ತಳಿಗೆ ಹೋಲಿಸಿದರೆ ಇದು ಎರಡು ಹೆಚ್ಚುವರಿ ಸ್ಪೈಕ್ ರೂಪಾಂತರಗಳನ್ನು ಹೊಂದಿದೆ. 39 ದೇಶಗಳು ಮತ್ತು ಅಮೆರಿಕದ 38 ರಾಜ್ಯಗಳಲ್ಲಿ ಇದು ಪತ್ತೆಯಾಗಿದೆ ಎಂದು ಡಾ. ಕಾರ್ಯಕಾರ್ಟೆ ಹೇಳಿದರು.
ಜಾಗತಿಕವಾಗಿ EG.5.1 ರೂಪಾಂತರವು ಮಾರ್ಚ್ 24, 2023 ರಲ್ಲಿ ಕಂಡುಬಂದಿದೆ. ಭಾರತದಲ್ಲಿ, EG.5.1 ರ ಮೊದಲ ಮತ್ತು ಏಕೈಕ ಪ್ರಕರಣವು ಮೇ 29, 2023 ರಂದು ಮಹಾರಾಷ್ಟ್ರದಿಂದ ವರದಿಯಾಗಿದೆ. ಇಲ್ಲಿಯವರೆಗೆ, ಓಮಿಕ್ರಾನ್ EG.5.1 ಇತರ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ತೀವ್ರವಾದ ಕಾಯಿಲೆಯನ್ನು ಉಂಟುಮಾಡುತ್ತದೆ ಅಥವಾ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಲ್ಲಿ ಎಂದು ಡಾ. ಕಾರ್ಯಕಾರ್ಟೆ ಹೇಳಿದ್ದಾರೆ.
2,000ಕ್ಕೂ ಹೆಚ್ಚು ಎಚ್1ಎನ್1 ಮತ್ತು ಎಚ್3ಎನ್2 ಪ್ರಕರಣ ವರದಿ :
ಮಹಾರಾಷ್ಟ್ರದಲ್ಲಿ ಒಟ್ಟು 2,045 ಎಚ್1ಎನ್1 ಮತ್ತು ಎಚ್3ಎನ್2 ಪ್ರಕರಣಗಳು ವರದಿಯಾಗಿವೆ. 13 ಸಾವುಗಳು ಸಂಭವಿಸಿವೆ ಏಳು ಎಚ್1 ಎನ್1 ಮತ್ತು ಆರು ಇನ್ಫ್ಲುಯೆನ್ಸದಿಂದ ವರದಿಯಾಗಿದೆ.
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು ಮತ್ತು ಮುಂತಾದ ರೋಗಲಕ್ಷಣಗಳನ್ನು ಹೊಂದಿರುವ ಒಟ್ಟು 9.22 ಲಕ್ಷ ಶಂಕಿತ ಜ್ವರ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ.