alex Certify SHOCKING: ಮತ್ತೊಂದು ಹೊಸ ಕೊರೋನಾ ವೈರಸ್ ಪತ್ತೆ – ನಾಯಿಗಳಿಂದ ಬಂದ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮತ್ತೊಂದು ಹೊಸ ಕೊರೋನಾ ವೈರಸ್ ಪತ್ತೆ – ನಾಯಿಗಳಿಂದ ಬಂದ ಸೋಂಕು

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತೇ ಹೋರಾಡುತ್ತಿರುವ ಹೊತ್ತಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೋನಾ ಕಂಡುಬಂದಿದ್ದು ಮಲೇಷ್ಯಾದಲ್ಲಿ ಮತ್ತೊಂದು ರೀತಿಯ ಕೊರೋನಾ ವೈರಸ್ ಕಂಡುಬಂದಿದೆ.

ಸಂಶೋಧಕರು ಅವುಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ. ಈ ಸೋಂಕು ನಾಯಿಗಳಿಂದ ಬಂದಿದೆ ಎಂದು ಹೇಳಲಾಗಿದೆ. ಮನುಷ್ಯರಲ್ಲಿ ಹರಡುತ್ತಿರುವ ಸೋಂಕು ನಾಯಿಗಳಿಂದ ಹರಡಿದೆ. NPR ವರದಿಯ ಪ್ರಕಾರ, ವಿಜ್ಞಾನಿಗಳು ಪ್ರಾಣಿಗಳಿಂದ ಜನರಿಗೆ ತಗುಲಿದ ಇತ್ತೀಚಿನ ವೈರಸ್ ಯಾವುದು ಎಂಬುದನ್ನು ಕಂಡು ಹಿಡಿದಿದ್ದಾರೆ.

ಈ ಕೊರೋನಾ ವೈರಸ್ ಮಾದರಿಯ ಅಧ್ಯಯನ ಕೈಗೊಳ್ಳಲಾಗಿದೆ. ಡಾ. ಗ್ರೆಗೊರಿ ಗ್ರೇ ಅವರು ತಮ್ಮ ಲ್ಯಾಬ್ ನಲ್ಲಿರುವ ಪದವೀಧರ ವಿದ್ಯಾರ್ಥಿಯಾದ ಲೆಶನ್ ಕ್ಸಿಯುಗೆ ಎಲ್ಲ ಕೊರೋನಾ ವೈರಸ್ ಗಳನ್ನು ಪತ್ತೆ ಹಚ್ಚುವಂತಹ ಹೆಚ್ಚು ಶಕ್ತಿಯುತವಾದ ಪರೀಕ್ಷೆ ನಡೆಸುವಂತೆ ಸವಾಲು ಹಾಕಿದ್ದರು.

ಅಂತಹ ಪರೀಕ್ಷೆಯನ್ನು ಕೈಗೊಂಡ ಲೆಶನ್, ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ನ್ಯುಮೋನಿಯಾಕ್ಕೆ ಸಂಬಂಧಿಸಿದ ಸಂಪೂರ್ಣ ಹೊಸ ಕೊರೋನಾ ವೈರಸ್ ಗಮನಿಸಿದ್ದಾರೆ. ಹೆಚ್ಚಾಗಿ ಮಕ್ಕಳಲ್ಲಿ ಬಾಧಿಸುವ 8ನೇ ಕೊರೋನಾ ವೈರಸ್ ರೂಪಾಂತರ ಇದಾಗಿದೆ ಎಂದು ಕ್ಲಿನಿಕಲ್ ಸಾಂಕ್ರಾಮಿಕ ರೋಗಗಳ ಜರ್ನಲ್ನಲ್ಲಿ ವರದಿ ಮಾಡಲಾಗಿದೆ.

2017 -18 ರಲ್ಲಿ ಮಲೇಷ್ಯಾದ ಸರವಾಕ್‌ನ ಆಸ್ಪತ್ರೆಯಲ್ಲಿ ರೋಗಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇವುಗಳು COVID-19 ರೋಗಿಗಳಿಂದ ವೈದ್ಯರು ಸಂಗ್ರಹಿಸುವಂತಹ ಆಳವಾದ ಮೂಗಿನ ಸ್ವ್ಯಾಬ್‌ಗಳಾಗಿವೆ ಎಂದು ಗ್ರೇ ಹೇಳುತ್ತಾರೆ.

ರೋಗಿಗಳು ಸಾಮಾನ್ಯ ನ್ಯೂಮೋನಿಯಾದಿಂದ ಬಳಲುತ್ತಿರುವಂತೆ ಕಾಣುತ್ತಿದ್ದರು. ಆದರೆ, ಪರೀಕ್ಷೆಯ ನಂತರ 301 ಮಾದರಿಗಳಲ್ಲಿ 8 ಮಂದಿಯಲ್ಲಿ ಇಂತಹ ಸೋಂಕು ಕಾಣಿಸಿಕೊಂಡಿದೆ. ಶ್ವಾಸಕೋಶದ ಮೇಲ್ಭಾಗ ಮತ್ತು ದವಡೆ ಭಾಗ ಕೊರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಇದನ್ನು ಡಾಗ್ ವೈರಸ್ ಎಂದು ಕರೆಯಲಾಗಿದೆ.

ಯುಎಸ್ ನ ಓಹಿಯೋ ಸ್ಟೇಟ್ ಯೂನಿವರ್ಸಿಟಿಯಲ್ಲಿರುವ ಪ್ರಾಣಿ ಕೊರೋನಾ ವೈರಸ್ ವಿಶ್ವ ತಜ್ಞರಾದ ವೈರಾಲಜಿಸ್ಟ್ ಅನಸ್ತಾಸಿಯಾ ವ್ಲಾಸೊವಾ ಅವರಿಗೆ ಮಾದರಿಗಳನ್ನು ಕಳುಹಿಸಲಾಗಿದೆ. ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎನ್ನಲು ಇನ್ನು ಯಾವುದೇ ಪುರಾವೆಗಳಿಲ್ಲ ಎಂದು ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ವಿಭಾಗದ ವೈರಾಲಜಿಸ್ಟ್ ಕ್ಸುಮಿಂಗ್ ಜಾಂಗ್ ಹೇಳುತ್ತಾರೆ. ಆದರೆ ಈ ರೋಗಿಗಳು ಹೇಗೆ ವೈರಸ್‌ಗೆ ತುತ್ತಾದರು ಅಥವಾ ಸೋಂಕಿತ ಪ್ರಾಣಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆಯೇ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಅವರು.

ಜಾಂಗ್ ಅವರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಕೊರೋನಾ ವೈರಸ್ ಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ಹೊಸ ವೈರಸ್ ಮಾನವ ರೋಗಕಾರಕ ಎಂದು ಕರೆಯುವ ಮೊದಲು ಅವರು ಭವಿಷ್ಯದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಯಲು ವಿಜ್ಞಾನಿಗಳು ಜನರಲ್ಲಿ ಇನ್ನೂ ಹೆಚ್ಚಿನ ಪರೀಕ್ಷೆಯನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...