ಹೊಸ ಬಟ್ಟೆ ಖರೀದಿ ಮಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಹೊಸ ಬಟ್ಟೆ ಖರೀದಿ ಮಾಡಿದ ದಿನವೇ ಅದನ್ನು ಧರಿಸಿ ಓಡಾಡುವವರಿದ್ದಾರೆ. ಆದ್ರೆ ಕೆಲವರು ಈಗ್ಲೂ ಹಳೆ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಹೊಸ ಬಟ್ಟೆಗೆ ಗಂಗಾಜಲವನ್ನು ಚಿಮುಕಿಸಿ, ಸೂರ್ಯನಿಗೆ ನಮಸ್ಕಾರ ಮಾಡಿ ಧರಿಸುತ್ತಾರೆ.
ಹೊಸ ಬಟ್ಟೆಯನ್ನು ಬೇಕಾಬಿಟ್ಟಿ ಧರಿಸುವುದು ಒಳ್ಳೆಯದಲ್ಲ. ಅದಕ್ಕೆ ಕೆಲವೊಂದು ನಿಯಮಗಳಿವೆ. ಹೊಸ ಬಟ್ಟೆಯನ್ನು ಯಾವಾಗ್ಲೂ ತೊಳೆದೇ ಧರಿಸಬೇಕು. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹೊಸ ಬಟ್ಟೆಗೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ತೊಳೆಯದೆ ಬಟ್ಟೆ ಧರಿಸಿದ್ರೆ ಚರ್ಮ ರೋಗ ಕಾಡುವ ಸಾಧ್ಯತೆಯಿರುತ್ತದೆ. ತುರಿಕೆ, ಕೆಂಪು ಗುಳ್ಳೆ ಕಾಣಿಸಿಕೊಳ್ಳಬಹುದು.
ಹೊಸ ಬಟ್ಟೆ ಧರಿಸುವ ಮುನ್ನ ತಿಥಿ, ನಕ್ಷತ್ರ, ವಾರ ನೋಡುವುದು ಸೂಕ್ತ. ಯಾವ ರಾಶಿಯವರು ಯಾವ ದಿನ ಹೊಸ ಬಟ್ಟೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ. ಹಿಂದೂ ಜ್ಯೋತಿಷ್ಯದ ಪ್ರಕಾರ 4, 9, 14 ರಂದು ಹೊಸ ಬಟ್ಟೆ ಧರಿಸುವುದು ಅಶುಭ. ಅಶ್ವಿನಿ, ರೋಹಿಣಿ, ಪುಷ್ಯ, ರೇವತಿ ನಕ್ಷತ್ರದಲ್ಲಿ ಹೊಸ ಬಟ್ಟೆ ಧರಿಸಬಾರದು.