ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಭಾರತದಲ್ಲಿ ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಆಡಿಷನ್ ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ ಸ್ಟೈಲಿಂಗ್ನೊಂದಿಗೆ ಸಜ್ಜುಗೊಂಡಿರುವ ಈ ಸ್ಕೂಟರ್ನ ಬೆಲೆ 87,138 ರೂಪಾಯಿ.
ಹೋಂಡಾ ಗ್ರಾಜಿಯಾ 125 ನ ಮುಂಭಾಗವನ್ನು ಕಿತ್ತಳೆ, ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳನ್ನು ಕಾಣಬಹುದು. ಈ ಸ್ಕೂಟರ್ನ ವೀಲ್ ರಿಮ್ಗಳು ಕಿತ್ತಳೆ ಬಣ್ಣದಲ್ಲಿದೆ. 125 ಸಿಸಿ ಸ್ಕೂಟರ್ಗೆ ಇದು ಸ್ಪೋರ್ಟಿನೆಸ್ ನೀಡುತ್ತದೆ.
ಎಲ್ಇಡಿ ಡಿಸಿ ಹೆಡ್ಲ್ಯಾಂಪ್ಗಳು, ಸ್ಪ್ಲಿಟ್ ಎಲ್ಇಡಿ ಪೊಸಿಷನ್ ಲ್ಯಾಂಪ್ಗಳು, ಇಂಟಿಗ್ರೇಟೆಡ್ ಪಾಸಿಂಗ್ ಸ್ವಿಚ್, ಎಂಜಿನ್ ಕಟ್-ಆಫ್ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಇಂಟೆಲಿಜೆಂಟ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಗಳು ಮತ್ತು ಟ್ರಿಪಲ್ ಸ್ಟೆಪ್ ಅಡ್ಜಸ್ಟಬಲ್ ರಿಯರ್ ಸಸ್ಪೆನ್ಷನ್ ಇದ್ರ ವಿಶೇಷ.
ಎಂಜಿನ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಂಜಿನ್ ಪ್ರೋಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ಐಡಲಿಂಗ್ ಸ್ಟಾಪ್ ಸಿಸ್ಟಮ್ ಮತ್ತು ವರ್ಧಿತ ಸ್ಮಾರ್ಟ್ ಪವರ್ ನೊಂದಿಗೆ ಬರುತ್ತದೆ. ಇದು 6,000 ಆರ್ಪಿಎಂನಲ್ಲಿ 8.25 ಪಿಎಸ್ ಪವರ್ ಮತ್ತು 5,000 ಆರ್ಪಿಎಂ ನಲ್ಲಿ 10.3 ಎನ್ ಪಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.