
ಬೆಂಗಳೂರು: ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮೂರು ದಿನದ ನವಜಾತ ಶಿಶುವನ್ನು ಸ್ಥಳಾಂತರ ಮಾಡಲಾಗಿದೆ.
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮಗುವನ್ನು ಸ್ಥಳಾಂತರಿಸಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ ಕಾರಣಕ್ಕಾಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಮಗುವನ್ನು ಕರೆತರಲಾಗಿದೆ.
ರಾತ್ರಿ 10:10ಕ್ಕೆ ಶಿವಮೊಗ್ಗದಿಂದ ಹೊರಟ ಆಂಬುಲೆನ್ಸ್ 1.30 ಗಂಟೆಗೆ ನಾರಾಯಣ ಹೃದಯಕ್ಕೆ ತಲುಪಿದೆ. ಆಂಬುಲೆನ್ಸ್ ಚಾಲಕ ಜಗದೀಶ್, ಸ್ಟಾಫ್ ನರ್ಸ್ ಗಳಾದ ಹನುಮಂತ, ವಿನಯ್, ಪೋಷಕರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಮಗುವನ್ನು ಕರೆತಂದಿದ್ದಾರೆ. ವೈದ್ಯರು ಮಗುವಿಗೆ ಓಪನ್ ಸರ್ಜರಿ ಮಾಡಲಿದ್ದಾರೆ ಎನ್ನಲಾಗಿದೆ.