ಕೊಪ್ಪಳ: ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯ ರ್ಯಾಪಿಡ್ ವಾರ್ಡ್ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.
ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶಿಶು ಶವ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಾರ್ಡ್ ಇದಾಗಿದ್ದು, ಸಮೀಪದಲ್ಲಿ ಹೆರಿಗೆ ವಿಭಾಗ ಇಲ್ಲ. ನೌಕರರೊಬ್ಬರು ಶೌಚಾಲಯ ಸ್ವಚ್ಛಗೊಳಿಸಲು ನೀರು ಹಾಕಿದಾಗ ಶಿಶು ಶವ ತೇಲಿದೆ. ಗೊಂಬೆ ಇರಬಹುದೆಂದು ಅದನ್ನು ತೆಗೆಯಲು ಹೋದಾಗ ತಲೆ ಮಾತ್ರ ಹೊರ ಬಂದಿದೆ. ನಂತರ ಕೈಕಾಲು, ಮುಂಡ ಪ್ರತ್ಯೇಕವಾಗಿರುವುದು ಕಂಡುಬಂದಿದೆ. ಕಿಮ್ಸ್ ವೈದ್ಯಕೀಯ ಅಧೀಕ್ಷಕರು ಕೊಪ್ಪಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.