ನವದೆಹಲಿ: ಬ್ಯಾಂಕ್‌ಗಳು ಗ್ರಾಹಕರಿಗೆ ತಮ್ಮ ಆಭರಣಗಳು, ಎಫ್‌ಡಿ ಪೇಪರ್‌ಗಳನ್ನು ಹೆಚ್ಚು ಸುರಕ್ಷಿತವಾಗಿ ಇಡಲು ಲಾಕರ್ ಆಯ್ಕೆಗಳನ್ನು ಒದಗಿಸುತ್ತವೆ. ಆದಾಗ್ಯೂ, ವಿವಿಧ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಲಾಕರ್‌ಗಳನ್ನು ಬಳಸಿಕೊಳ್ಳಲು ಹೊಸ ನಿಯಮ ಜಾರಿಗೊಳಿಸಲಾಗಿದೆ.
ಜನವರಿ 1, 2023 ರಿಂದ ಲಾಕರ್ ನಿಯಮಗಳು ಬದಲಾಗಲಿವೆ. ಲಾಕರ್ ಗ್ರಾಹಕರು ತಮ್ಮ ಲಾಕರ್ ಒಪ್ಪಂದಗಳನ್ನು ಜನವರಿಯೊಳಗೆ ನವೀಕರಿಸಬೇಕಾಗಿದೆ. ದೇಶದ ಎಲ್ಲಾ ಬ್ಯಾಂಕುಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ.
ಅಸ್ತಿತ್ವದಲ್ಲಿರುವ ಎಲ್ಲಾ ಲಾಕರ್ ಠೇವಣಿದಾರರು ನವೀಕರಿಸಿದ ಲಾಕರ್ ವ್ಯವಸ್ಥೆಗಾಗಿ ಅರ್ಹತಾ ಪುರಾವೆಗಳನ್ನು ಒದಗಿಸಬೇಕಿದೆ. ಜ.1 ರ ಒಳಗೆ ನವೀಕರಣ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ಸಿಸಿ ಟಿವಿ ಕ್ಯಾಮೆರಾವನ್ನು ಸ್ಟ್ರಾಂಗ್ ರೂಮ್‌ನ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮತ್ತು ಕಾರ್ಯಾಚರಣೆಯ ಸಾಮಾನ್ಯ ಪ್ರದೇಶಗಳಲ್ಲಿ ಸ್ಥಾಪಿಸಲು ಸಲಹೆ ನೀಡಿದೆ. 180 ದಿನಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಅದರ ರೆಕಾರ್ಡಿಂಗ್ ಅನ್ನು ಸಂರಕ್ಷಿಸುವುದನ್ನು ಕಡ್ಡಾಯ ಮಾಡಿದೆ.
ಈ ನಿಯಮದ ಪ್ರಕಾರ, ಲಾಕರ್‌ನಲ್ಲಿ ಇರಿಸಲಾದ ವಸ್ತುಗಳಿಗೆ ಯಾವುದೇ ಹಾನಿಯಾಗಿದ್ದರೆ, ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಪರಿಹಾರವನ್ನು ಒದಗಿಸಬೇಕು. ಅಷ್ಟೇ ಅಲ್ಲ ಗ್ರಾಹಕರು ಡಿಸೆಂಬರ್ 31ರವರೆಗೆ ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಬೇಕಿದ್ದು, ಅದರಲ್ಲಿ ಲಾಕರ್ ಬಗ್ಗೆ ಎಲ್ಲ ಮಾಹಿತಿ ನೀಡಲಾಗುತ್ತದೆ. ಇದರೊಂದಿಗೆ, ಬ್ಯಾಂಕ್ ಗ್ರಾಹಕರಿಗೆ ಲಾಕರ್ ನಲ್ಲಿರುವ ತಮ್ಮ ವಸ್ತುಗಳ ಬಗ್ಗೆ ನಿರಂತರ ಅಪ್ಡೇಟ್ ಸಿಗಲಿದೆ.