alex Certify ʼಬ್ಯಾಂಕ್‌ ಲಾಕರ್‌ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಯಾಂಕ್‌ ಲಾಕರ್‌ʼ ಹೊಂದಿರುವವರಿಗೆ ತಪ್ಪದೆ ತಿಳಿದಿರಲಿ ಬದಲಾಗಿರುವ ಈ ನಿಯಮ

ಆಗಸ್ಟ್‌ 18 ರಿಂದ ಅನ್ವಯವಾಗುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ) ಹೊಸ ಸೆಫ್ಟಿ ಡೆಪಾಸಿಟ್‌ ಲಾಕರ್‌ ನಿಯಮಗಳನ್ನು ಜಾರಿಗೆ ತಂದಿದೆ. ಬೆಲೆಬಾಳುವ ಆಭರಣ, ಮಹತ್ವದ ದಾಖಲೆಗಳನ್ನು ಇಡಲು ಬ್ಯಾಂಕ್‌ ಗಳಲ್ಲಿ ಲಾಕರ್‌ ಸೌಲಭ್ಯಗಳನ್ನು ಜನರು ಬಳಸಿಕೊಳ್ಳುತ್ತಾರೆ.

ಆದರೆ ಲಾಕರ್‌ ಪಡೆಯುವಾಗ ಇರುವ ಆಸಕ್ತಿ, ಅಗತ್ಯತೆ ಸ್ವಲ್ಪ ಕಾಲವಾದ ಮೇಲೆ ಲಾಕರ್‌ ಬಾಡಿಗೆ ಪಡೆದವರಿಗೆ ಇರಲ್ಲ. ಪರಿಣಾಮ ಅದರ ಬಾಡಿಗೆ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸಲು ತಕರಾರು ತೆಗೆಯುತ್ತಾರೆ. ಇಲ್ಲವೇ ಬ್ಯಾಂಕ್‌ಗಳ ಕೈಗೆ ಸಿಗಲ್ಲ.

ದೇಶದ ಎಲ್ಲಾ ಮೀನುಗಾರರಿಗೆ ಗುಡ್ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ

ಇಂಥ ಗೊಂದಲಗಳಿಂದ ಪಾರಾಗಲು ನಿರ್ಧರಿಸಿರುವ ಬ್ಯಾಂಕ್‌ ಗಳು ಒಂದು ಉಪಾಯ ಮಾಡಿವೆ. ಲಾಕರ್‌ ಬಾಡಿಗೆಯನ್ನು ನಿಶ್ಚಿತ ಠೇವಣಿಯ ಬಡ್ಡಿ ರೂಪದಲ್ಲಿ ಪಡೆದುಕೊಳ್ಳಲು ನಿರ್ಧರಿಸಿವೆ.

ಅದರಂತೆ ಲಾಕರ್‌ ಬೇಕೆನ್ನುವವರು ಮೂರು ವರ್ಷಗಳ ಬಾಡಿಗೆಗೆ ಆಗುವಷ್ಟು ಟರ್ಮ್‌ ಡೆಪಾಸಿಟ್‌ ಮೊತ್ತವನ್ನು ಬ್ಯಾಂಕ್‌ನಲ್ಲಿ ಇರಿಸಬೇಕಾಗುತ್ತದೆ. ಒಂದು ವೇಳೆ ಮಧ್ಯದಲ್ಲೇ ಲಾಕರ್‌ ಬೇಡವೆಂದು ತೀರ್ಮಾನಿಸಿದಲ್ಲಿ ಲಾಕರ್‌ ಬ್ರೇಕಿಂಗ್‌ ಶುಲ್ಕ ಕೂಡ ಟರ್ಮ್‌ ಡೆಪಾಸಿಟ್‌ ಮೂಲಕವೇ ಕಡಿತಗೊಳ್ಳಲಿದೆ.

BIG NEWS: ಎಲ್ಲರಿಗೂ ಉಚಿತ ವಿದ್ಯುತ್ ಸಂಪರ್ಕ; ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ

ಒಂದು ವೇಳೆ ಟರ್ಮ್‌ ಡೆಪಾಸಿಟ್‌ ಮೊತ್ತವನ್ನು ಅಡ್ವಾನ್ಸ್‌ ರೂಪದಲ್ಲಿ ಗ್ರಾಹಕರು ಬ್ಯಾಂಕ್‌ಗೆ ನೀಡಿದ್ದೇ ಆದಲ್ಲಿ, ಅದರ ಕೆಲವು ಪ್ರಮಾಣವನ್ನು ಗ್ರಾಹಕರಿಗೆ ಬ್ಯಾಂಕ್‌ ವಾಪಸ್‌ ನೀಡಬೇಕಿದೆ.

ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಬ್ಯಾಂಕ್‌ಗಳು ತಪ್ಪದೇ ಲಾಕರ್‌ ಬಾಡಿಗೆದಾರರನ್ನು ಸಂಪರ್ಕಿಸಿ, ಅವರ ವಸ್ತುಗಳನ್ನು ಒಪ್ಪಿಸಿಬಿಡಬೇಕು. ಆದರೆ, ನೈಸರ್ಗಿಕ ವಿಕೋಪದಿಂದಾಗುವ ನಷ್ಟಕ್ಕೆ ಬ್ಯಾಂಕ್‌ಗಳು ಪರಿಹಾರ ನೀಡಬೇಕಿಲ್ಲ.

ಈ ರಾಶಿಯವರಿಗೆ ಇಂದು ಕಾದಿದೆ ಅನಿರೀಕ್ಷಿತ ಉಡುಗೊರೆ

ಬಹಳ ಮುಖ್ಯವಾಗಿ ಹೊಸ ನಿಯಮದ ಪ್ರಕಾರ ಲಾಕರ್‌ನಲ್ಲಿ ಅಪಾಯಕಾರಿ ಸಾಧನಗಳು, ಸ್ಫೋಟಕಗಳು, ಶಸ್ತ್ರಗಳನ್ನು ಗ್ರಾಹಕರು ಇರಿಸುವಂತಿಲ್ಲ. ಒಂದು ವೇಳೆ ಈ ತರಹದ ವಸ್ತುಗಳಿರುವುದು ಬಯಲಾದಲ್ಲಿ ವಾರ್ಷಿಕ ಬಾಡಿಗೆಯ 100 ಪಟ್ಟು ದಂಡವನ್ನು ಬ್ಯಾಂಕ್‌ಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್‌ ಸಿಬ್ಬಂದಿಯೇ ಗ್ರಾಹಕರಿಗೆ ವಂಚನೆಗೈದರೆ, ಆತನಿಗೂ ಇಷ್ಟೇ ದಂಡವನ್ನು ವಿಧಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...