ಬೆಂಗಳೂರು : ರಾಜ್ಯದಲ್ಲಿನ ವಯಸ್ಕರುಗಳ (18+ ವರ್ಷದ ಮೇಲಿನ ಹೊಸ ಆಧಾರ್ ನೋಂದಣಿ ಮತ್ತು ದಾಖಲಾತಿಗಳನ್ನು ರಾಜ್ಯ ಆಧಾರ್ ಪೋರ್ಟಲ್ ನಲ್ಲಿ ಪರಿಶೀಲಿಸುವ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರವು ರಾಜ್ಯಪತ್ರವನ್ನು ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರ ದಿನಾಂಕ: 09-09-2022 ರ ಪತ್ರದಲ್ಲಿ ಪ್ರಸ್ತುತ ಒಟ್ಟಾರೆ 134 ಕೋಟಿಗೂ ಹೆಚ್ಚು, ನಿವಾಸಿಗಳಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದ್ದು, ಜನಸಂಖ್ಯೆಯ 93% ಕ್ಕಿಂತ ಹೆಚ್ಚು ಮತ್ತು ವಯಸ್ಕರ (18+) ಜನಸಂಖ್ಯೆಯ ಸುಮಾರು 100% ರಷ್ಟು ಭಾಗ ಮುಕ್ತಾಯಗೊಂಡಿರುತ್ತದೆ, ಇತ್ತೀಚಿನ ದಿನಗಳಲ್ಲಿ ಆಧಾರ್ ಅನ್ನು ಪ್ರಾಥಮಿಕ ಗುರುತಿನ ದಾಖಲೆಯಾಗಿ ಪರಿಗಣಿಸುತ್ತಿರುವ ನಿಟ್ಟಿನಲ್ಲಿ, ಆಧಾರ್ ನೋಂದಣಿ ಚಟುವಟಿಕೆಯಲ್ಲಿ ದಾಖಲಾದಿಗಳ ವಂಚನೆಗಳು ಸಂಭವಿಸಿದಲ್ಲಿ ರಾಷ್ಟ್ರದ ಭದ್ರತೆಯ ಮೇಲೆಪರಿಣಾಮ ಬೀರುತ್ತದೆ, ಸದರಿ ವಯಸ್ಕರ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಬಲಪಡಿಸಲು ಆಧಾರ್ ಸಂಖ್ಯೆಗಳನ್ನು ರಚಿಸುವ ಮೊದಲು ದಾಖಲಾತಿಗಳ ಪರಿಶೀಲನಾ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರಸ್ತಾಪಿಸಲಾಗಿರುತ್ತದೆ.
ನಿವಾಸಿಗಳು ಆಧಾರ್ ನೋಂದಣಿ ಪ್ರಕ್ರಿಯೆಗೆ ಒದಗಿಸುವ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ರಾಜ್ಯ ಸರ್ಕಾರಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಲ್ಪಿಸಲಾಗುವ ವ್ಯವಸ್ಥೆಯ ಮೂಲಕ ಪರಿಶೀಲಿಸಬೇಕೆಂದು ಪ್ರಸ್ತಾಪಿಸಲಾಗಿರುತ್ತದೆ. ನಿವಾಸಿಗಳು. ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (UIDAI) “ರಾಜ್ಯದ ಆಧಾರ್ ಪೋರ್ಟಲ್ ನ್ನು ಅಭಿವೃದ್ಧಿಪಡಿಸಿದ್ದು ಹಾಗೂ ಪ್ರತಿ ರಾಜ್ಯದ ಪರವಾಗಿ ಒಬ್ಬ ನೋಡಲ್ ಅಧಿಕಾರಿಯನ್ನು “ರಾಜ್ಯದ ಆಧಾರ್ ಫೋರ್ಟಲ್ ನಿರ್ವಹಣೆಗಾಗಿ ನೇಮಿಸಲು ಸೂಚಿಸಲಾಗಿರುತ್ತದೆ.