ವಿದ್ಯೆ ಕಲಿಯಲು ಯಾವ ವಯಸ್ಸೂ ದೊಡ್ಡದಲ್ಲ ಎನ್ನುವ ಮಾತನ್ನು ಮತ್ತೊಮ್ಮೆ ಜ್ಞಾಪಿಸಿದ 81 ವರ್ಷದ ವ್ಯಕ್ತಿಯೊಬ್ಬರು, ತಮ್ಮ 77ನೇ ವಯಸ್ಸಿನಲ್ಲಿ ಶಾಲೆಗೆ ಮರಳಿದ ಕಥೆ ಹಂಚಿಕೊಂಡಿದ್ದಾರೆ.
ಗುಡ್‌ನ್ಯೂಸ್ ಕರೆಸ್ಪಾಂಡಂಟ್ ಹೆಸರಿನಲ್ಲಿರುವ ಈ ಟ್ವಿಟರ್ ಖಾತೆಯಲ್ಲಿ ಈ ಹಿರಿಯ ವ್ಯಕ್ತಿ ಬಹಳ ಗಹನವಾಗಿ ಓದುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ತನ್ನ 9ನೇ ವಯಸ್ಸಿಗೇ ಶಾಲೆಗೆ ಗುಡ್‌ಬೈ ಹೇಳಬೇಕಾಗಿ ಬಂದಿದ್ದ ಈ ವ್ಯಕ್ತಿ, 68 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಮತ್ತೆ ಶಾಲೆಗೆ ಸೇರಿಕೊಂಡಿದ್ದರು.
ಆನ್ಲೈನ್ ಕ್ಲಾಸ್ ನಲ್ಲಿ ಅಚಾತುರ್ಯ: ಅಶ್ಲೀಲ ವೀಡಿಯೋ ಪ್ರಸಾರ; ಮಕ್ಕಳು, ಶಿಕ್ಷಕರಿಗೆ ಮುಜುಗರ
“ಅಧ್ಯಯನಕ್ಕೆ ದಿನದ ಅನೇಕ ಗಂಟೆಗಳ ಮೀಸಲಿಡುವ ಮೂಲಕ ಇವರು ತಮ್ಮ ಕನಸನ್ನು ಪೂರೈಸಿಕೊಂಡಿದ್ದಾರೆ. ಯಾವತ್ತೂ ಯಾವ ವಿಚಾರವನ್ನೂ ಮಧ್ಯದಲ್ಲೇ ಕೈಬಿಡಬಾರದು ಎಂಬುದನ್ನು ಅವರು ನಮಗೆ ತಿಳಿಸಿದ್ದಾರೆ,” ಎಂದು ಹೇಳಿಕೊಂಡಿರುವ ಈ ಹಿರಿಯ ವ್ಯಕ್ತಿಯ ಮೊಮ್ಮಗ, “ನನ್ನ ಅಜ್ಜನಿಗೆ ಈಗ 81 ವರ್ಷ ವಯಸ್ಸು. 9ನೇ ವಯಸ್ಸಿನಲ್ಲಿ ಅವರು ಕೆಲಸ ಮಾಡಲೆಂದು ಶಾಲೆ ಬಿಟ್ಟರು. ಅವರಿಗೆ ಓದುವುದು ಎಂದರೆ ಯಾವಾಗಲೂ ಇಷ್ಟವಿತ್ತು — ಅವರನ್ನು 77ನೇ ವಯಸ್ಸಿನಲ್ಲಿ ನಾವು ಶಾಲೆಗೆ ಸೇರಿಸಿದ್ದೇವೆ. ತಮ್ಮ ಕನಸನ್ನು ಪೂರೈಸಿಕೊಂಡ ಅವರು ಈಗ ದಿನದ ಅನೇಕ ಗಂಟೆಗಳನ್ನು ಅಧ್ಯಯನಕ್ಕಾಗಿ ಮೀಸಲಿಡುತ್ತಿದ್ದಾರೆ,” ಎಂದು ಹೇಳಿದ್ದಾರೆ.