alex Certify 56 ನೇ ಪ್ರಯತ್ನದಲ್ಲಿ ಹತ್ತನೇ ಕ್ಲಾಸ್ ಪಾಸ್…! ಈಗ 12 ನೇ ತರಗತಿಗೆ ದಾಖಲಾದ 77 ವರ್ಷದ ವೃದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

56 ನೇ ಪ್ರಯತ್ನದಲ್ಲಿ ಹತ್ತನೇ ಕ್ಲಾಸ್ ಪಾಸ್…! ಈಗ 12 ನೇ ತರಗತಿಗೆ ದಾಖಲಾದ 77 ವರ್ಷದ ವೃದ್ದ

ನಿಮ್ಮ ಹೃದಯದಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧಿಸಬಲ್ಲಿರಿ. ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ಈ ವ್ಯಕ್ತಿ. ನಮ್ಮ ಕನಸುಗಳನ್ನು ನನಸಾಗಿಸಲು ವಯಸ್ಸು ಎಂದಿಗೂ ತಡವಾಗಿಲ್ಲ ಎಂದು ಸಾಬೀತುಪಡಿಸುವ ಮೂಲಕ, ಜಾಲೋರ್‌ನ 77 ವರ್ಷದ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್ 56 ಅಟೆಂಪ್ಟ್ ಗಳಲ್ಲಿ ಹತ್ತನೇ ತರಗತಿ ಪಾಸ್ ಮಾಡಿದ್ದಾರೆ.‌ ಅಷ್ಟೇ ಅಲ್ಲಾ ಈಗ ಅವರು ಹನ್ನೆರಡನೇ ತರಗತಿ ಪರೀಕ್ಷೆ ನೀಡಲು ದಾಖಲಾಗಿದ್ದಾರೆ. 55 ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ವೈಷ್ಣವ್ 56ನೇ ಪ್ರಯತ್ನದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ತಮ್ಮ 70 ರ ಹರೆಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿರುವ ಇವರ ಕಥೆಯು ಅನೇಕರಿಗೆ ಸ್ಫೂರ್ತಿ. ಜಲೋರ್‌ನ ಸರ್ದಾರ್‌ಗಢ ಗ್ರಾಮದಲ್ಲಿ 1945 ರಲ್ಲಿ ಜನಿಸಿದ ಹುಕುಮ್‌ದಾಸ್ ಟೀಖಿ ಗ್ರಾಮದಲ್ಲಿ 1 ರಿಂದ 9 ನೇ ತರಗತಿಯವರೆಗೂ ಉತ್ತೀರ್ಣರಾಗಿದ್ದರು, 1962 ರಲ್ಲಿ ಮೊಕಲ್ಸರ್‌ನಲ್ಲಿ ಅವರು ಹತ್ತನೇ ತರಗತಿ ಪರೀಕ್ಷೆಯನ್ನು ಮೊದಲ ಬಾರಿ ಬಾರ್ಮರ್‌ನ ಕೇಂದ್ರದಲ್ಲಿ ಬರೆದಿದ್ದರು. ಮೊದಲ ಪರೀಕ್ಷೆಯಲ್ಲಿ ಫೇಲ್ ಆಗಿ ಸಪ್ಲಿಮೆಂಟರಿ ಪರೀಕ್ಷೆಯಲ್ಲೂ ಅನುತ್ತೀರ್ಣರಾದರು.

ಇದ್ರಿಂದ ಅವರ ಸ್ನೇಹಿತರು ನೀನು ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ ಎಂದು ಛೇಡಿಸುತ್ತಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಹುಕುಮದಾಸ್ ಒಂದಲ್ಲಾ ಒಂದು ದಿನ ನಾನು ಹತ್ತನೆ ತರಗತಿಯಲ್ಲಿ ಪಾಸ್ ತೇರ್ಗಡೆ ಆಗುತ್ತೀನಿ ಎಂದಿದ್ದರು. ಆನಂತರ ನೀರು ಸರಬರಾಜು ಇಲಾಖೆಯಲ್ಲಿ ನಾಲ್ಕನೇ ದರ್ಜೆಯ ನೌಕರನಾದರು, ಅದಾದ ಮೇಲೂ ಛಲ ಬಿಡದ ಹುಕುಮ್ ದಾಸ್ ಅವರು ಸಾಮಾನ್ಯ ಅಧ್ಯಯನವನ್ನು ತೊರೆದು ಸಪ್ಲಿಮೆಂಟರಿ ಅಭ್ಯರ್ಥಿಯಾಗಿ ಪರೀಕ್ಷೆಗಳಿಗೆ ಹಾಜರಾಗಲು ಪ್ರಾರಂಭಿಸಿದರು.

2005 ರಲ್ಲಿ, ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಅವರು, 2010 ರವರೆಗೆ, ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಆಯೋಜಿಸಿದ್ದ ಹತ್ತನೇ ತರಗತಿಯ ಪರೀಕ್ಷೆಗೆ 48 ಬಾರಿ ಕಾಣಿಸಿಕೊಂಡರು. ಅದರ ನಂತರ, ಅವರು ರಾಜ್ಯ ಮುಕ್ತ ಮಂಡಳಿಯಿಂದ ಪ್ರಯತ್ನಿಸಿದರು ಮತ್ತು ಅಂತಿಮವಾಗಿ 2019 ರಲ್ಲಿ ಅವರು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅದರ ನಂತರ ಅವರು ಈಗ ಅಂದ್ರೆ, 2021-22 ಅವಧಿಯಲ್ಲಿ 12 ನೇ ತರಗತಿಯ ಕಲಾ ವಿಭಾಗಕ್ಕೆ ದಾಖಲಾಗಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಅವರ ಮೊಮ್ಮಗ ಕೂಡ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...