ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಎಲ್ಲ ಸಂಬಂಧಗಳು ನಂಬಿಕೆ ಮೇಲೆ ನಿಂತಿರುತ್ತವೆ. ಅದ್ರಲ್ಲೂ ದಾಂಪತ್ಯ, ನಂಬಿಕೆ, ವಿಶ್ವಾಸ, ಗೌರವದ ಮೇಲೆ ನಿಂತಿರುತ್ತದೆ. ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ಯಾವುದೇ ಗುಟ್ಟಿರಬಾರದೆಂದು ಅನೇಕರು ನಂಬಿದ್ದಾರೆ. ಗುಟ್ಟಿರಬಾರದು ನಿಜ, ಹಾಗಂತ ಹಳೆ ಕಹಿ ನೆನಪುಗಳನ್ನು ಅವರ ಮುಂದಿಟ್ಟು, ಸಂಬಂಧ ಹಾಳು ಮಾಡಿಕೊಳ್ಳಬಾರದು. ಪ್ರತಿಯೊಬ್ಬರಿಗೂ ಅವರದೆ ಆದ ಅಭಿಪ್ರಾಯವಿದೆ. ಅನೇಕ ಬಾರಿ ನಮಗೆ ಅರಿವಿಲ್ಲದೆ ಕೆಲವೊಂದು ಸಂಗತಿಯನ್ನು ಸಂಗಾತಿ ಮುಂದೆ ಹೇಳಿ ಸಂಬಂಧ ಹಾಳು ಮಾಡಿಕೊಳ್ಳುತ್ತೇವೆ. ಕೆಲ ಸಂಗತಿಯನ್ನು ಸಂಗಾತಿ ಮುಂದೆ ಹೇಳದಿರುವುದು ಒಳ್ಳೆಯದು.
ಕಳೆದು ಹೋಗಿದ್ದು ಹೋಗಿದೆ. ಮತ್ತೆ ಅದನ್ನು ತಿರುವಿಹಾಕಬೇಕಾಗಿಲ್ಲ. ಸಂಗಾತಿ ನಿಮ್ಮ ಹಿಂದಿನ ಜೀವನ, ಅಲ್ಲಿ ಬಂದು ಹೋದ ಮಾಜಿಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದರೆ ಅವರನ್ನು ಸಮಾಧಾನಗೊಳಿಸಿ. ಅದ್ರಿಂದ ಪ್ರಯೋಜನವಿಲ್ಲ. ಸಂತೋಷ ಹಾಳಾಗುತ್ತದೆ ಎಂಬುದನ್ನು ತಿಳಿಹೇಳಿ. ಯಾವುದೇ ಕಾರಣಕ್ಕೂ ಮಾಜಿಗಳ ಬಗ್ಗೆ ಸಂಗಾತಿ ಮುಂದೆ ಹೇಳುವುದು ಬೇಡ.
ಈಗಾಗಲೇ ಮಾಜಿಗಳ ಬಗ್ಗೆ ಹೇಳಿದ್ದರೆ, ಅವರ ಬಗ್ಗೆ ಪದೇ ಪದೇ ಹೇಳುವುದನ್ನು ತಪ್ಪಿಸಿ. ಸಂಗಾತಿ ಮುಂದೆ ಮಾಜಿಗಳ ಬಗ್ಗೆ ಮಾತನಾಡಬೇಡಿ. ಇದ್ರಿಂದ ಇಡೀ ಜೀವನ ಹಾಳಾಗುತ್ತದೆ.
ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ನಿಮ್ಮ ಮಾಜಿಯಂತೆ ಅಥವಾ ಪಾಲಕರಂತೆ ನಿಮ್ಮ ಸಂಗಾತಿ ಇರುವುದಿಲ್ಲ. ನಿಮಗೆ ಅವರ ಕೆಲ ಸ್ವಭಾವ ಇಷ್ಟವಾಗಿರುವುದಿಲ್ಲ. ಆದ್ರೆ ಅದನ್ನು ಎಂದಿಗೂ ನಿಮ್ಮ ಪಾಲಕರ, ಸ್ನೇಹಿತರ ಮುಂದೆ ಹೇಳಬೇಡಿ. ಇದು ದಾಂಪತ್ಯ ಜೀವನದ ಬಿರುಕಿಗೆ ಕಾರಣವಾಗುತ್ತದೆ. ಹಾಗೆ ಮಾತು ತಪ್ಪಿ, ಯಾಕೆ ಈ ಮದುವೆ ಬೇಕಿತ್ತು ನನಗೆ ಎಂಬ ಮಾತುಗಳನ್ನು ಸಂಗಾತಿ ಮುಂದೆ ಆಡಬೇಡಿ.