ಲೈವ್ ನಲ್ಲಿರುವಾಗಲೇ ವರದಿಗಾರ್ತಿಗೆ ಕಿರುಕುಳ ಕೊಟ್ಟ ಕಿಡಿಗೇಡಿಗಳು 25-07-2021 3:48PM IST / No Comments / Posted In: Latest News, Live News, International ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಥರಾವರಿ ಕಿರುಕುಳಗಳು ಆಗುವುದು ದುರದೃಷ್ಟಕರ. ಬಹಳಷ್ಟು ಬಾರಿ ಈ ರೀತಿ ಅನುಭವಗಳಾದಾಗ ಪೊಲೀಸರಿಗೆ ದೂರು ನೀಡಲು ಮಹಿಳೆಯರು ಹಿಂದೇಟು ಹಾಕುವ ಕಾರಣ ಪುಂಡರ ಈ ಆಟಾಟೋಪಕ್ಕೆ ಕಡಿವಾಣ ಹಾಕುವುದು ಬಲು ಕಷ್ಟ. ನ್ಯೂಸ್ 1 ಸುದ್ದಿವಾಹಿನಿಯ ವರೆದಿಗಾರ್ತಿ ಬ್ರಯಾನ್ನಾ ಹಂಬ್ಲಿನ್ ನ್ಯೂಯಾರ್ಕ್‌ನ ರಾಚೆಸ್ಟರ್‌ನಲ್ಲಿ ವರದಿ ಮಾಡುವ ವೇಳೆ ತನಗೆ ಆದ ಕಿರುಕುಳದ ಅನುಭವದ ವಿಡಿಯೋ ಶೇರ್ ಮಾಡಿಕೊಂಡಿದ್ದು, “ಮಹಿಳೆಯಾಗಿ, ಅದರಲ್ಲೂ ಮಹಿಳಾ ವರದಿಗಾರ್ತಿಯಾಗಿ ಫೀಲ್ಡ್‌ನಲ್ಲಿದ್ದ ವೇಳೆ ಕಿರುಕುಳದ ಅನುಭವಗಳು ಬಹಳಷ್ಟು ಆಗುತ್ತಲೇ ಇರತ್ತವೆ. ಇಂಥ ಘಟನೆಗಳನ್ನು ಉದಾಸೀನದಿಂದ ಕಂಡು ನಿಮ್ಮ ಕೆಲಸದೊಂದಿಗೆ ಮುಂದುವರೆಯುವುದನ್ನು ಕಲಿಯುವ ಮಟ್ಟಿಗೆ ನಿಮಗೆ ಈ ಥರ ಅನುಭವಗಳು ಆಗುತ್ತಲೇ ಇರುತ್ತವೆ” ಎಂದು ಟ್ವೀಟ್ ಮಾಡಿದ್ದಾರೆ. BIG BREAKING: 6 ತಿಂಗಳು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಕೆ ಮಾಡಿ; ನಿಡುಮಾಮಿಡಿ ಶ್ರೀಗಳು ಮನೆಯೊಂದರ ಎದುರು ನಿಂತುಕೊಂಡು ಸುದ್ದಿ ವರದಿಗಾರಿಕೆ ಮಾಡಲು ಸಜ್ಜಾಗಿದ್ದ ಹಂಬ್ಲಿನ್‌ರನ್ನು ಕೆಲ ಪುರುಷರು ಪೀಡಿಸುತ್ತಿರುವ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. WARNING: CRUDE LANGUAGEBeing hit on and harassed as a woman, especially as a woman reporter out in the field, happens so often you learn how to roll with it or ignore it. This time it happened to be recorded only seconds before my hit. There are A LOT of things wrong with this. pic.twitter.com/5Ok58Vm7e0 — Brianna Hamblin (@BriReports) July 23, 2021