ಸ್ನಾನ ಮಾಡುವ ಮೊದಲು ತಲೆಗೆ ಎಣ್ಣೆ ಹಚ್ಚುವುದು ಉತ್ತಮ. ಆದರೆ ಅನೇಕರು ಕೂದಲಿಗೆ ಗಂಟೆಗಟ್ಟಲೇ ಎಣ್ಣೆ ಹಚ್ಚುತ್ತಾರೆ. ಈ ರೀತಿ ಮಾಡಿದರೆ ನೆತ್ತಿಯಲ್ಲಿ ಮಣ್ಣು ನೆಲೆಗೊಳ್ಳಲು ಕಾರಣವಾಗಬಹುದು. ಇದರಿಂದ ಕೂದಲು ಉದುರುವಿಕೆ ಆರಂಭವಾಗುತ್ತದೆ.
ಸರಿಯಾದ ಶಾಂಪೂ :
ಶಾಂಪೂ ಕೂದಲನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ ಆದ್ದರಿಂದ ಸರಿಯಾದ ಶಾಂಪೂ ಆಯ್ಕೆ ಮಾಡಬೇಕು. ಹೆಚ್ಚಿನವರು ವೈದ್ಯರ ಸಲಹೆಯಿಲ್ಲದೆ ಶ್ಯಾಂಪೂಗಳನ್ನು ಬಳಸಲು ಪ್ರಾರಂಭಿಸುತ್ತಾರೆ ಮತ್ತು ಹಲವಾರು ಶಾಂಪೂಗಳಲ್ಲಿ ರಾಸಾಯನಿಕಗಳನ್ನು ಅತಿಯಾಗಿ ಬಳಸಲಾಗಿರುತ್ತದೆ ಮತ್ತು ಅವು ಕೂದಲು ಹಾನಿಗೆ ಕಾರಣವಾಗುತ್ತವೆ.
ಅತಿಯಾಗಿ ಕೂದಲನ್ನು ತೊಳೆಯುವುದು :
ಹೆಚ್ಚಿನವರು ಕೂದಲನ್ನು ತೊಳೆದಷ್ಟೂ ಸ್ವಚ್ಛವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅತಿಯಾಗಿ ಕೂದಲನ್ನು ತೊಳೆಯುವುದು ಸಹ ಒಳ್ಳೆಯದಲ್ಲ. ಇದರಿಂದ ಕೂದಲು ಹೆಚ್ಚೆಚ್ಚು ಹಾನಿಗೊಳಗಾಗುತ್ತದೆ. ಕೂದಲಿನೊಳಗೆ ಅತಿಯಾಗಿ ನೀರು ಪ್ರವೇಶಿಸುವುದರಿಂದ ಕೂದಲಿನ ಬೇರು ದುರ್ಬಲಗೊಳ್ಳುತ್ತಾ ಹೋಗುತ್ತದೆ.
ಕಂಡೀಷನರ್ :
ಕೂದಲನ್ನು ಶಾಂಪೂ ಮಾಡಿದ ನಂತರ, ಅವುಗಳನ್ನು ಕಂಡೀಷನರ್ ಮಾಡುವುದು ಉತ್ತಮ. ಕಂಡೀಷನರ್ ಅನ್ನು ಹಚ್ಚುವಾಗ ಅನೇಕ ಬಾರಿ ಜನರು ತಮ್ಮ ಕೂದಲನ್ನು ಉಜ್ಜಲು ಪ್ರಾರಂಭಿಸುತ್ತಾರೆ .ಇದು ಕೂದಲಿನ ಹಾನಿಗೆ ಕಾರಣವಾಗಬಹುದು.