ಈಗ್ಲೂ ಕೆಲವು ಕಡೆ ನೇರಳೆ ಹಣ್ಣು ಸಿಗ್ತಿದೆ. ಬೇಸಿಗೆ ಕೊನೆಯಲ್ಲಿ ನೇರಳೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ನೇರಳೆ ಹಣ್ಣು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ನೇರಳೆ ಹಣ್ಣು ಸೇವನೆ ನಂತ್ರ ಕೆಲವೊಂದು ಆಹಾರ ಸೇವನೆ ಮಾಡಬಾರದು. ಇದು ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ನೇರಳೆ ಹಣ್ಣು ಸೇವನೆ ಮಾಡಿದ ನಂತ್ರ ಹಾಲನ್ನು ಸೇವನೆ ಮಾಡಬೇಡಿ. ಹಾಲು, ಹಣ್ಣಿನ ಜೊತೆ ಸೇರಿ ವಿಷವಾಗುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಸಂಬಂಧಿ ಖಾಯಿಲೆಗೆ ಕಾರಣವಾಗುತ್ತದೆ. ಹಾಲು ಕುಡಿದ ತಕ್ಷಣ ನೇರಳೆ ಹಣ್ಣು ತಿನ್ನಬೇಡಿ. ಹಾಗೆ ನೇರಳೆ ಹಣ್ಣು ತಿಂದ 2 ಗಂಟೆ ನಂತ್ರ ಹಾಲು ಸೇವನೆ ಮಾಡಿ.
ನೇರಳೆ ಹಣ್ಣು ತಿಂದ ಕೆಲ ಸಮಯ ಅರಿಶಿನ ಸೇವನೆ ಮಾಡಬೇಡಿ. ಇದು ರಿಯಾಕ್ಷನ್ ಆಗುವ ಸಾಧ್ಯತೆಯಿದೆ. ಇದು ಹೊಟ್ಟೆ ಉರಿಗೆ ಕಾರಣವಾಗುತ್ತದೆ. ಹಾಗಾಗಿ ಒಂದು ಗಂಟೆ ಬಿಟ್ಟು ಅರಿಶಿನ ಸೇವನೆ ಮಾಡಿ.
ನೇರಳೆ ಹಣ್ಣಿನ ಜೊತೆ ಉಪ್ಪಿನ ಕಾಯಿಯನ್ನೂ ಸೇವನೆ ಮಾಡಬೇಡಿ. ಎರಡನ್ನೂ ಒಟ್ಟಿಗೆ ಸೇವನೆ ಮಾಡಬಾರದು. ಉಪ್ಪಿನಕಾಯಿ ಹುಳಿ, ನೇರಳೆ ಹಣ್ಣಿನ ಜೊತೆ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.