ಸಾಮಾನ್ಯವಾಗಿ ಆಹಾರ ತಯಾರಿಸುವಾಗ, ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯುತ್ತೇವೆ. ಪಾತ್ರೆಗಳನ್ನು ಸ್ವಚ್ಛಗೊಳಿಸಿ, ಆರೋಗ್ಯಕರ ಆಹಾರಕ್ಕೆ ಗಮನ ನೀಡ್ತೆವೆ. ಆದ್ರೆ ಯಾವ ಪಾತ್ರೆಯಲ್ಲಿ ಆಹಾರ ತಯಾರಿಸ್ತಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ. ಆಹಾರ ತಯಾರಿಸುವ ಪಾತ್ರೆ ಯಾವ ಲೋಹದಿಂದ ಮಾಡಿದ್ದು ಎಂಬುದು ಮಹತ್ವ ಪಡೆಯುತ್ತದೆ. ಕೆಲವೊಂದು ಲೋಹಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.
ತಾಮ್ರ : ತಾಮ್ರದ ಪಾತ್ರೆಯಲ್ಲಿ ನೀರು ಸೇವನೆ ಹಾಗೂ ಆಹಾರ ಸೇವನೆ ಒಳ್ಳೆಯದು ಎನ್ನುತ್ತಾರೆ. ಆದ್ರೆ ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಹೆಚ್ಚು ಬಿಸಿ ಮಾಡಬಾರದು. ತಾಮ್ರದ ಪಾತ್ರೆಗೆ ಉಪ್ಪು ಹಾಗೂ ಎಸಿಡ್ ಸೇರ್ತಿದ್ದಂತೆ ಅನೇಕ ಕೆಮಿಕಲ್ ಉತ್ಪತ್ತಿಯಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಆಹಾರವನ್ನು ಕುದಿಸಿ ಸೇವನೆ ಮಾಡಿದ್ರೆ ಆಹಾರ ವಿಷವಾಗುವ ಸಾಧ್ಯತೆಯಿದೆ.
ಅಲ್ಯೂಮಿನಿಯಂ : ಅಲ್ಯೂಮಿನಿಯಂ ಪಾತ್ರೆ ಕೂಡ ಆಹಾರ ತಯಾರಿಸಲು ಯೋಗ್ಯವಲ್ಲ. ಟೊಮೆಟೊ, ವಿನೆಗರ್ ನಂತಹ ಆಮ್ಲೀಯ ಆಹಾರ ಪದಾರ್ಥಗಳಿಗೆ ಅಲ್ಯೂಮಿನಿಯಂ ಪ್ರತಿಕ್ರಿಯಿಸುತ್ತದೆ. ಇದ್ರಿಂದ ಆಹಾರ ವಿಷವಾಗುತ್ತದೆ.
ಹಿತ್ತಾಳೆ : ಸಾಮಾನ್ಯವಾಗಿ ಸಾಂಪ್ರದಾಯಿಕ ಆಹಾರಗಳನ್ನು ಇದ್ರಲ್ಲಿ ತಯಾರಿಸಲಾಗುತ್ತದೆ. ಆಹಾರ ತಯಾರಿಸಲು ಹೆಚ್ಚು ಸಮಯ ಹಿಡಿಯಬಲ್ಲ ಚಿಕನ್, ಮಟನ್ ಸೇರಿದಂತೆ ಅನೇಕ ಆಹಾರವನ್ನು ಇದ್ರಲ್ಲಿ ತಯಾರಿಸಲಾಗುತ್ತದೆ. ಹಿತ್ತಾಳೆ ಕೂಡ ಬಿಸಿಯಾಗ್ತಿದ್ದಂತೆ ಉಪ್ಪು ಮತ್ತು ಆಸಿಡ್ ಜೊತೆ ಕೆಲ ರಾಸಾಯನಿಕ ಪದಾರ್ಥವನ್ನು ಬಿಡುಗಡೆ ಮಾಡುತ್ತದೆ. ಹಿತ್ತಾಳೆ ಪಾತ್ರೆ,ಅನ್ನ ತಯಾರಿಸಲು ಯೋಗ್ಯವಾಗಿದೆ.
ಆಹಾರ ತಯಾರಿಸಲು ಅತ್ಯುತ್ತಮ ಲೋಹ ಕಬ್ಬಿಣ. ಇದ್ರಲ್ಲಿ ಯಾವುದೇ ರೀತಿಯ ಆಹಾರ ತಯಾರಿಸಬಹುದು. ಕಬ್ಬಿಣ ನಮ್ಮ ಶರೀರಕ್ಕೆ ಅವಶ್ಯಕವಾಗಿದೆ. ಇದಲ್ಲದೆ ಮಣ್ಣಿನ ಪಾತ್ರೆ ಆಹಾರ ತಯಾರಿಸಲು ಬಹಳ ಒಳ್ಳೆಯದು. ಆದ್ರೆ ಇದ್ರಲ್ಲಿ ಆಹಾರ ತಯಾರಿಸಲು ಹೆಚ್ಚು ಸಮಯ ಬೇಕಾಗುತ್ತದೆ.