ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು ಶುರುವಾಗುತ್ತದೆ. ಆರೋಗ್ಯ ವೃದ್ಧಿ ಬಯಸುವವರು ಮಳೆಗಾಲದಲ್ಲಿ ಕೆಲವೊಂದು ಆಹಾರದಿಂದ ದೂರವಿರುವುದು ಒಳ್ಳೆಯದು.
ಮಳೆಗಾಲದಲ್ಲಿ ಹಸಿರು ತರಕಾರಿಗಳಿಂದ ದೂರವಿರುವುದು ಒಳ್ಳೆಯದು. ಪಾಲಕ್, ಮೆಂತ್ಯೆ, ಬದನೆ, ಎಲೆಕೋಸು ಸೇವಿಸಬಾರದು. ಇದ್ರಲ್ಲಿ ಕೀಟಗಳು ವೇಗವಾಗಿ ಬೆಳೆಯುತ್ತವೆ. ಕೀಟಗಳು ದೇಹ ಸೇರುವುದ್ರಿಂದ ಹೊಟ್ಟೆ ಸಮಸ್ಯೆ ಕಾಡಲು ಶುರುವಾಗುತ್ತದೆ.
ಮಳೆಗಾಲದಲ್ಲಿ ಮೀನು ಸೇರಿದಂತೆ ಸಮುದ್ರ ಜೀವಿಗಳು ಸಂತಾನೋತ್ಪತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತವೆ. ಇದ್ರ ಸೇವನೆಯಿಂದ ಫುಡ್ ಪಾಯಿಸನ್ ಕಾಡುತ್ತದೆ.
ಮಳೆಗಾಲದಲ್ಲಿ ಅಣಬೆ ಸೇವನೆ ಮಾಡಬೇಡಿ. ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಮಳೆಗಾಲದಲ್ಲಿ ಮಸಾಲೆಯುಕ್ತ ಹುರಿದ ಪದಾರ್ಥವನ್ನು ಸೇವಿಸಬೇಡಿ. ಇದು ಪಿತ್ತವನ್ನು ಹೆಚ್ಚಿಸುತ್ತದೆ. ರಸ್ತೆ ಬದಿಯಲ್ಲಿ ಸಿಗುವ ಮಸಾಲೆ ಪದಾರ್ಥ, ಪಾನಿಪುರಿ ಸೇವನೆಯಿಂದ ದೂರವಿರಿ.
ಆರೋಗ್ಯಕ್ಕೆ ಯೋಗ್ಯವೆನ್ನುವ ಸಲಾಡ್ ಮಳೆಗಾಲದಲ್ಲಿ ಬೇಡ. ಮಳೆಗಾಲದಲ್ಲಿ ಹಸಿ ತರಕಾರಿ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹಾಗೆ ಸರಿಯಾಗಿ ಸಂರಕ್ಷಿಸದ ಹೊರಗಿರುವ ಹಣ್ಣು, ತರಕಾರಿಗಳನ್ನು ತಿನ್ನಬೇಡಿ.
ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುತ್ತದೆ. ಎಲ್ಲ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಾಂಸಹಾರ ಸೇವನೆ ಬೇಡ.