ದೃಷ್ಟಿ ಭ್ರಮಾಣ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಒಂಥರಾ ಥ್ರಿಲ್ ಕೊಡುವ ಕೆಲಸ. ಇಂಥದ್ದೇ ಒಂದು ಚಿತ್ರದಲ್ಲಿ ಅಡಗಿರುವ ಹುಲಿಯನ್ನು ಪತ್ತೆ ಮಾಡುವುದನ್ನು ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ಮಿಜೋರಾಂನ ಡಂಪಾ ಹುಲಿ ಸಂರಕ್ಷಣಾ ತಾಣದಲ್ಲಿ ಸೆರೆ ಹಿಡಿಯಲಾಗಿದೆ.
ಅರಣ್ಯ ಇಲಾಖೆಯ ಗಾರ್ಡ್ ಜಖುಮಾ ಡಾನ್ ಸೆರೆ ಹಿಡಿದಿರುವ ಈ ಚಿತ್ರವು, ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಸಂರಕ್ಷಿತ ಅರಣ್ಯದಲ್ಲಿ ಹುಲಿ ಇರುವುದನ್ನು ಸಾಕ್ಷೀಕರಿಸಿದೆ ಎಂದು ಸಾಂಕ್ಚುವರಿ ಏಷ್ಯಾ ವೃತ್ತ ಪತ್ರಿಕೆ ತಿಳಿಸಿದೆ.
ಯಾವುದೇ ಗೊಂದಲವಿಲ್ಲ; ಎಲ್ಲರೂ ಒಗ್ಗಟ್ಟಾಗಿದ್ದೇವೆ; ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸಿಎಂ
2018ರ ಗಣತಿ ಕಾರ್ಯಕ್ರಮದ ವೇಳೆ ಈ ಸಂರಕ್ಷಿತ ಧಾಮದಲ್ಲಿ ಒಂದೇ ಒಂದು ಹುಲಿ ಕಂಡು ಬರದೇ ಇದ್ದ ಕಾರಣ ’ಹುಲಿಗಳೇ ಇಲ್ಲದ ಹುಲಿ ಧಾಮ’ ಎಂದು ಡಾಂಪಾಗೆ ಅಡ್ಡ ಹೆಸರು ಕೊಡಲಾಗಿತ್ತು.
ನಿಮಗೆ ತಿಳಿದಿರಲಿ ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು
ತನ್ನ ಸುತ್ತಲಿನ ಪರಿಸರದಲ್ಲಿ ಕರಗಿಹೋದಂತೆ ಕಾಣುವ ಹುಲಿಯನ್ನು ಪತ್ತೆ ಮಾಡಲು ಬಲೇ ನಾಜೂಕಾದ ದೃಷ್ಟಿಯೇ ಬೇಕು.
https://www.instagram.com/p/CQFo03gIXbX/?utm_source=ig_web_copy_link