
ರೆಸ್ಲಿಂಗ್ ಜಗತ್ತಿನ ಜನಪ್ರಿಯ ತಾರೆ ಸಿಎಂ ಪಂಕ್ ಪುನಃ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಡಬ್ಲಡಬ್ಲುಇಗೆ ಗುಡ್ ಬೈ ಹೇಳಿದ್ದ ಪಂಕ್, ಮತ್ತೆ ತಮ್ಮ ಫ್ಯಾನ್ಸ್ ಗಾಗಿ ರೆಸ್ಲಿಂಗ್ ಮಾಡುವ ಸುಳಿವು ಕೊಟ್ಟಿದ್ದಾರೆ. ತಮ್ಮ ತವರು ಷಿಕಾಗೊದಲ್ಲಿ ಶುಕ್ರವಾರ ರಾತ್ರಿ ನಡೆದ ಡಬ್ಲುಡಬ್ಲುಇ ಪಂದ್ಯದ ವೇಳೆ ಆರಾಮಾಗಿ ನಡೆದುಬಂದ ಪಂಕ್ ಅವರನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.
SHOCKING: ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಹುಡುಗಿ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ಪಾಪಿ; ತಾಯಿಗೆ ಬಿಗ್ ಶಾಕ್
ಆವರಣದಲ್ಲಿ ಹಲವರು ಆನಂದಭಾಷ್ಪ ಕೂಡ ಸುರಿಸಿದ್ದಾರೆ. ಟ್ವಿಟರ್‍ನಲ್ಲಿ ಪಂಕ್ ಆಗಮನಕ್ಕೆ ಭಾರಿ ಸಂತಸವಾಗಿದೆ. 2014ರ ರಾಯಲ್ ರಂಬಲ್ ಬಳಿಕ ಸಿಎಂ ಪಂಕ್ ರೆಸ್ಲಿಂಗ್‍ನಿಂದ ದೂರವಾಗಿದ್ದರು.
ಮಹಿಳಾ ರೆಸ್ಲರ್ ಡಾ. ಬ್ರಿಟ್ ಬೇಕರ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಪಂಕ್ ಜತೆಗಿರುವ ಫೋಟೊ ಹಾಕಿ ಅಭಿಮಾನ ತೋರಿಸಿದ್ದಾರೆ.