ನೆದರ್ ಲ್ಯಾಂಡ್ಸ್ ನಲ್ಲಿ ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಕರಣಗಳನ್ನು ನಿಭಾಯಿಸಲು, ಡಚ್ ಸರ್ಕಾರವು ತನ್ನ ನಾಗರಿಕರಿಗೆ ಉಚಿತ ಸನ್ ಸ್ಕ್ರೀನ್ ನೀಡುವು ಮೂಲಕ ಸೂರ್ಯನಿಂದ ರಕ್ಷಣೆ ನೀಡಲು ನಿರ್ಧರಿಸಿದೆ.
ಸರ್ಕಾರದ ಪ್ರಕಾರ, ಈ ಬೇಸಿಗೆಯಲ್ಲಿ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ, ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಮತ್ತು ದೇಶಾದ್ಯಂತ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ಸನ್ ಕ್ರೀಮ್ ವಿತರಕಗಳನ್ನು ಲಭ್ಯವಾಗುವಂತೆ ಮಾಡಲಾಗುವುದು.
ಈ ಹೊಸ ಡ್ರೈವ್ ಆಸ್ಟ್ರೇಲಿಯಾದ ಸ್ಲಿಪ್-ಸ್ಲಾಪ್-ಸ್ಲ್ಯಾಪ್ ಅಭಿಯಾನದಿಂದ ಪ್ರೇರಿತವಾಗಿದೆ. ಸನ್-ಕೇರ್ ಅಭ್ಯಾಸಗಳನ್ನು ಸುಧಾರಿಸಲು ಅಭಿಯಾನ ಕೈಗೊಂಡಿದ್ದು, ಸನ್ ಕ್ರೀಮ್ ಬಳಕೆ ಅಭ್ಯಾಸ ಬೆಳೆಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಮಕ್ಕಳಿಗೆ ಚಿಕ್ಕಂದಿನಿಂದಲೇ ಸನ್‌ಸ್ಕ್ರೀನ್ ಹಚ್ಚುವ ಅಭ್ಯಾಸವಾಗಬೇಕು ಎಂದು ನಾರ್ತ್ ಸೀ ಬಾತ್ ರೆಸಾರ್ಟ್‌ನ ಕೌನ್ಸಿಲರ್ ಹೇಳಿದ್ದಾರೆ.
ಯುರೋಪಿನಾದ್ಯಂತ, ಕಳೆದ ಎರಡು ದಶಕಗಳಲ್ಲಿ ಚರ್ಮದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಾರಾಂತ್ಯದಲ್ಲಿ ಮಧ್ಯ ಯುರೋಪ್‌ನಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನ ದಾಖಲಾಗಿದೆ.
ಚರ್ಮದ ಕ್ಯಾನ್ಸರ್‌ಗೆ ಮುಖ್ಯ ಕಾರಣವೆಂದರೆ ಸೂರ್ಯನ ಕ್ಕೆ ಅತಿಯಾದ ಹಾನಿಕಾರಕ ನೇರಳಾತೀತ ವಿಕಿರಣ. ಸೂರ್ಯನ ಕಿರಣಗಳು ದೇಹಕ್ಕೆ ಹಾನಿಕಾರಕವಾದ ನೇರಳಾತೀತ ಕಿರಣಗಳನ್ನು ಹೊರಸೂಸುತ್ತವೆ ಮತ್ತು ಜೀವಕೋಶದ ರಚನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ. ಚರ್ಮದ ಕ್ಯಾನ್ಸರ್ ನ ಆರಂಭಿಕ ಮತ್ತು ಸಾಮಾನ್ಯ ಲಕ್ಷಣವೆಂದರೆ ಚರ್ಮದ ಮೇಲೆ ನಿರ್ದಿಷ್ಟ ಪ್ರದೇಶದ ಬಣ್ಣದಲ್ಲಿ ಬದಲಾವಣೆ ಆಗಿದೆ. ಅದಕ್ಕಾಗಿಯೇ ಸನ್‌ಸ್ಕ್ರೀನ್‌ಗಳನ್ನು ಕಾಸ್ಮೆಟಿಕ್ ಎಂದು ಗ್ರಹಿಸಬಾರದು. ಚರ್ಮವನ್ನು ರಕ್ಷಿಸಲು ಅದು ಅವಶ್ಯಕ ಎಂದು ಹೇಳಲಾಗಿದೆ.