ಇದು ಬೆಲೆ ಏರಿಕೆ ಯುಗದಲ್ಲಿ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರಿಗೆ ಖುಷಿ ಸುದ್ದಿ ನೀಡಿದೆ.ಚಂದಾದಾರಿಕೆ ಬೆಲೆಯನ್ನು ಕಡಿಮೆ ಮಾಡಿ, ಅಮೆಜಾನ್ ಪ್ರೈಂಗೆ ಪೈಪೋಟಿ ನೀಡಿದೆ. ನೆಟ್ ಫ್ಲಿಕ್ಸ್ ಚಂದಾದಾರರಿಗೆ 149 ರೂಪಾಯಿಯಿಂದ ಪ್ಲಾನ್ ಪ್ರಾರಂಭವಾಗಲಿದೆ. 2016 ರಲ್ಲಿ ಸೇವೆ ಪ್ರಾರಂಭವಾದಾಗಿನಿಂದ ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಕಡಿಮೆ ಮಾಡಿರಲಿಲ್ಲ.
ಅಮೆಜಾನ್ ಪ್ರೈಮ್ ಯೋಜನೆಗಳು ಇಂದಿನಿಂದ ದುಬಾರಿಯಾಗಿವೆ. ಈ ಮಧ್ಯೆ ನೆಟ್ ಫ್ಲಿಕ್ಸ್ ಬೆಲೆ ಇಳಿಕೆ ಮಾಡಿ ಟಕ್ಕರ್ ನೀಡಲು ಮುಂದಾಗಿದೆ. ಈ ವರ್ಷದ ಆರಂಭದಲ್ಲಿ, ಡಿಸ್ನಿ + ಹಾಟ್‌ಸ್ಟಾರ್ ತನ್ನ ಮೊಬೈಲ್ ಮತ್ತು ಪ್ರೀಮಿಯಂ ಪ್ರಯೋಜನಗಳ ಬೆಲೆಯನ್ನುಪರಿಷ್ಕರಿಸಿತ್ತು.
ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನ ತಿಂಗಳ ಯೋಜನೆ ಬೆಲೆ 200 ರೂಪಾಯಿಗಿಂತ ಕಡಿಮೆಯಿದೆ. ಆದ್ರೆ ಡಿಸ್ನಿ + ಹಾಟ್‌ಸ್ಟಾರ್ ಯೋಜನೆಯು ವರ್ಷಕ್ಕೆ 499 ರೂಪಾಯಿಯಾಗುತ್ತದೆ.
ನೆಟ್ ಫ್ಲಿಕ್ಸ್ ಪರಿಷ್ಕೃತ ಚಂದಾದಾರಿಕೆ ಯೋಜನೆಗಳು:
ನೆಟ್‌ಫ್ಲಿಕ್ಸ್ ಮೊಬೈಲ್ ಯೋಜನೆಗಳು ಈಗ 199 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಮೊಬೈಲ್ ಯೋಜನೆಯು ಬಳಕೆದಾರರಿಗೆ ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ವಿಡಿಯೋ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ. ಹೈ ಡೆಫಿನಿಷನ್‌ನಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡಲು ಬಯಸುವ ಬಳಕೆದಾರರು 499 ರೂಪಾಯಿ ಪಾವತಿಸಬೇಕು. ಈ ಯೋಜನೆಯಲ್ಲಿ ಬಳಕೆದಾರರು ಒಂದೇ ಸಮಯದಲ್ಲಿ ಎರಡು ವಿಭಿನ್ನ ಸಾಧನಗಳಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡಬಹುದು. ನೆಟ್‌ಫ್ಲಿಕ್ಸ್‌ನ ಅತ್ಯಂತ ದುಬಾರಿ ಪ್ಲಾನ್, ಪ್ರೀಮಿಯಂ ಪ್ಲಾನ್ ಆಗಿದ್ದು, ಅದರ ಬೆಲೆ 649 ರೂಪಾಯಿ.
ಅಮೆಜಾನ್ ಪ್ರೈಂ ಪರಿಷ್ಕೃತ ಯೋಜನೆ:
ಅಮೆಜಾನ್ ಪ್ರೈಂ ಯೋಜನೆಗಳ ಬೆಲೆ ಇಂದಿನಿಂದ ಬದಲಾಗಿದೆ. ಈ ಹಿಂದೆ 129 ರೂಪಾಯಿಯಿದ್ದ ಮಾಸಿಕ ಯೋಜನೆ ಬೆಲೆ 179 ರೂಪಾಯಿಯಾಗಿದೆ. 329 ರೂಪಾಯಿಯಿದ್ದ ತ್ರೈಮಾಸಿಕ ಚಂದಾದಾರಿಕೆ ಬೆಲೆ 459 ರೂಪಾಯಿಯಾಗಿದೆ. 999 ರೂಪಾಯಿಯಿದ್ದ ವಾರ್ಷಿಕ ಯೋಜನೆ ಬೆಲೆ ಈಗ 1499 ರೂಪಾಯಿಯಾಗಿದೆ.
ಡಿಸ್ನಿ+ ಹಾಟ್‌ಸ್ಟಾರ್ ಪರಿಷ್ಕೃತ ಚಂದಾದಾರಿಕೆ ಯೋಜನೆ:
ಡಿಸ್ನಿ+ ಹಾಟ್‌ಸ್ಟಾರ್ ತನ್ನ ಯೋಜನೆಗಳನ್ನು ಸೆಪ್ಟೆಂಬರ್‌ನಲ್ಲಿ ಪರಿಷ್ಕರಿಸಿದೆ. ಡಿಸ್ನಿ+ ಹಾಟ್‌ಸ್ಟಾರ್ ಈಗ ಮೂರು ಪ್ಲಾನ್‌ಗಳನ್ನು ನೀಡುತ್ತಿದೆ. ಮೊಬೈಲ್ ಪ್ಲಾನ್ ಬೆಲೆ ವರ್ಷಕ್ಕೆ 499 ರೂಪಾಯಿ. ಸೂಪರ್ ಪ್ಲಾನ್ ಬೆಲೆ ವರ್ಷಕ್ಕೆ 899 ರೂಪಾಯಿ ಮತ್ತು ಪ್ರೀಮಿಯಂ ಪ್ಲಾನ್ ಬೆಲೆ ವರ್ಷಕ್ಕೆ 1499 ರೂಪಾಯಿ. ಮೊದಲ ಬೇಸಿಕ್ ಯೋಜನೆಯಲ್ಲಿ ಒಂದು ಡಿವೈಸ್ ನಲ್ಲಿ ಮಾತ್ರ ವಿಡಿಯೋ ವೀಕ್ಷಣೆ ಮಾಡಬಹುದು. ಎರಡನೇ ಪ್ಲಾನ್ ನಲ್ಲಿ ಎರಡು ಡಿವೈಸ್ ಗೆ ಅನುಮತಿ ನೀಡಲಾಗಿದೆ. ಮೂರನೇ ಹಾಗೂ ಕೊನೆಯ ಯೋಜನೆಯಲ್ಲಿ ನಾಲ್ಕು ಸಾಧನಗಳಲ್ಲಿ ಒಟ್ಟಿಗೆ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ.