ನೆಟ್ ಫ್ಲಿಕ್ಸ್ ಬಳಕೆದಾರರು ಇನ್ಮುಂದೆ, ಆಗಾಗ ರಿಚಾರ್ಜ್ ಮಾಡುವ ಅವಶ್ಯಕತೆಯಿಲ್ಲ. ಬಳಕೆದಾರರ ಬೇಡಿಕೆಗೆ ನೆಟ್ ಫ್ಲಿಕ್ಸ್ ಅಸ್ತು ಎಂದಿದೆ. ಗ್ರಾಹಕರ ಆಟೋ ಪೇ ಫೀಚರ್ ಸೇವೆ ಶುರು ಮಾಡಿದೆ. ಕಂಪನಿಯು ಅಂತಿಮವಾಗಿ ಯುಪಿಐ ಸ್ವಯಂ-ಪಾವತಿ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.
ನೆಟ್ ಫ್ಲಿಕ್ಸ್ ನಲ್ಲಿ ಹಣ ಇಲ್ಲವೆಂದ್ರೆ ಇನ್ಮುಂದೆ ಸೇವೆ ಬಂದ್ ಆಗುವುದಿಲ್ಲ. ಸ್ವಯಂ, ಯುಪಿಐನಿಂದ ಖಾತೆಗೆ ರಿಚಾರ್ಜ್ ಆಗಲಿದೆ. ಬಳಕೆದಾರರು ಇದಕ್ಕೆ ಯುಪಿಐ ಆಯ್ಕೆ ಆರಿಸಬೇಕಾಗುತ್ತದೆ.
ಯುಪಿಐ ಆಟೋಪೇ ವೈಶಿಷ್ಟ್ಯವು ನೆಟ್ ಫ್ಲಿಕ್ಸ್ ಬಳಕೆದಾರರು ಮತ್ತು ನೆಟ್ ಫ್ಲಿಕ್ಸ್ ಡಾಟ್ ಕಾಂನಲ್ಲಿ ಲಭ್ಯವಿದೆ. ಎಲ್ಲ ಬಳಕೆದಾರರೂ ಈ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ಮೊದಲು ನೆಟ್‌ಫ್ಲಿಕ್ಸ್ ಖಾತೆಗೆ ಲಾಗಿನ್ ಆಗಬೇಕು. ಬಿಲ್ಲಿಂಗ್ ವಿವರಗಳಿಗೆ ಹೋಗುವ ಮೂಲಕ ಪಾವತಿ ವಿಧಾನವನ್ನು ಬದಲಾಯಿಸಬಹುದು. ಅಲ್ಲಿ ಯುಪಿಐ ಆಟೋ ಪೇ ಪಾವತಿಯನ್ನು ಆಯ್ಕೆ ಮಾಡಿದ್ರೆ ಸಾಕಾಗುತ್ತದೆ. ಹೊಸ ಬಳಕೆದಾರರು ಬ್ರೌಸರ್‌ಗಾಗಿ, 499 ರೂಪಾಯಿ, 699 ರೂಪಾಯಿ,799 ರೂಪಾಯಿ ಅಥವಾ ಮೊಬೈಲ್ ಪ್ಲಾನ್‌ಗೆ 199 ರೂಪಾಯಿ, ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಯುಪಿಐ ಆಟೋ ಪೇ ವಿಧಾನದಲ್ಲಿ ಬಳಕೆದಾರರಿಗೆ ಪೇಟಿಎಂ ಅಥವಾ ಯುಪಿಐ ಐಡಿ ಕೇಳಲಾಗುತ್ತದೆ. ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಚಂದಾದಾರಿಕೆ ಪಡೆಯಬಹುದು.