ನೆಟ್ ಫ್ಲಿಕ್ಸ್ ಬಳಕೆದಾರರಿಗೆ ಬೇಸರದ ಸಂಗತಿಯೊಂದಿದೆ. ನೆಟ್ ಫ್ಲಿಕ್ಸ್ ಅಕೌಂಟ್ ಹಂಚಿಕೊಳ್ಳುವುದು ಸಾಮಾನ್ಯ ಸಂಗತಿ. ಸ್ನೇಹಿತರು, ಕುಟುಂಬಸ್ಥರ ನೆಟ್ ಫ್ಲಿಕ್ಸ್ ಅಕೌಂಟನ್ನು ಹಂಚಿಕೊಳ್ಳುತ್ತಾರೆ. ಚಂದಾದಾರಿಕೆ ಶುಲ್ಕವನ್ನು ಸ್ನೇಹಿತರು ಹಂಚಿಕೊಳ್ತಾರೆ. ಆದ್ರೆ ಇದು ನೆಟ್ ಫ್ಲಿಕ್ಸ್ ಗೆ ಖುಷಿ ನೀಡಿಲ್ಲ. ಅಕೌಂಟ್ ಹಂಚಿಕೊಳ್ಳುವ ಸೌಲಭ್ಯವನ್ನು ರದ್ದು ಮಾಡಲು ನೆಟ್ ಫ್ಲಿಕ್ಸ್ ಮುಂದಾಗಿದೆ.
ಮೂಲಗಳ ಪ್ರಕಾರ, ನೆಟ್ ಫ್ಲಿಕ್ಸ್ ಒಂದು ಹೊಸ ಫೀಚರ್ ಪರೀಕ್ಷೆ ಮಾಡ್ತಿದೆ. ಈ ಫೀಚರ್ ನಲ್ಲಿ ನೆಟ್ ಫ್ಲಿಕ್ಸ್ ಬಳಕೆದಾರರು ಅಕೌಂಟ್ ಹಂಚಿಕೊಳ್ಳುವಂತಿಲ್ಲ. ನೆಟ್ ಫ್ಲಿಕ್ಸ್ ಚಂದಾದಾರಿಕೆ ಶುಲ್ಕ ಹೆಚ್ಚಿದೆ. ನೆಟ್ ಫ್ಲಿಕ್ಸ್ ಈ ಫೀಚರ್ ಜಾರಿಗೆ ತಂದ್ರೆ ಅನೇಕರು ಇದ್ರಿಂದ ಹೊರಗೆ ಹೋಗುವ ಸಾಧ್ಯತೆಯಿದೆ.
BIG NEWS: ಯುವತಿ ಮೇಲೆ ಜೊಮ್ಯಾಟೋ ಬಾಯ್ ಹಲ್ಲೆ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’
ನೆಟ್ ಫ್ಲಿಕ್ಸ್ ಹೊಸ ಫೀಚರ್ ಹಿನ್ನಲೆಯಲ್ಲಿ ಅನೇಕರಿಗೆ ಪಾಪ್-ಅಪ್ ಕಳಿಸಲಾಗ್ತಿದೆ. ಅದ್ರಲ್ಲಿ ಹೊಸ ಫೀಚರ್ ಬಗ್ಗೆ ಮಾಹಿತಿ ನೀಡಲಾಗ್ತಿದೆ. ಇದಲ್ಲದೆ ನೆಟ್ ಫ್ಲಿಕ್ಸ್ 299 ರೂಪಾಯಿ ಮೊಬೈಲ್ ಪ್ಲಾನ್ ಕೂಡ ಪರೀಕ್ಷೆ ಮಾಡ್ತಿದೆ. ಈ ಪ್ಲಾನ್ ಮೊಬೈಲ್ ಗ್ರಾಹಕರಿಗೆ ಮಾತ್ರ. ವೆಬ್ ಸರಣಿ ಹಾಗೂ ಚಿತ್ರ ನೋಡಲು ಈ ಪ್ಲಾನ್ ಬಳಸಬಹುದು.