ಕೊರೊನಾ ನಂತ್ರ ವಿಶ್ವದಾದ್ಯಂತ ಸಿನಿಮಾ ಹಾಲ್ ಗಳು ಮೊದಲಿನಂತಿಲ್ಲ. ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಲು ಜನರು ಭಯಪಡ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಆನ್ಲೈನ್ ಸಿನಿಮಾ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಸಿನಿಮಾ ಜೊತೆ ಸಿರೀಸ್ ಗಳು ವೀಕ್ಷಕರ ಮನಸ್ಸು ಸೆಳೆಯುತ್ತಿವೆ. ನೆಟ್ಫ್ಲಿಕ್ಸ್, ಅಮೆಜಾನ್ ಫ್ರೈಂ ಚಂದಾದಾರರ ಸಂಖ್ಯೆ ಹೆಚ್ಚಾಗಿದೆ. ಅಮೆಜಾನ್ ಈಗಾಗಲೇ ತನ್ನ ಪ್ಲಾನ್ ಬೆಲೆ ಏರಿಸಿದೆ. ಈಗ ನೆಟ್ ಫ್ಲಿಕ್ಸ್ ಸರದಿ.
ಕೆಲವು ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಯೋಜನೆಗಳ ಬೆಲೆ ದುಬಾರಿಯಾಗಿದೆ. ಕಂಪನಿಯು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ದರಗಳನ್ನು ಹೆಚ್ಚಿಸಿದೆ. ಹೊಸ ಗ್ರಾಹಕರನ್ನು ಆಕರ್ಷಿಸಲು, ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಕೆಲ ದಿನಗಳ ಹಿಂದೆ ಕಡಿತಗೊಳಿಸಿದೆ. ಮಾಸಿಕ ಯೋಜನೆಯು ಭಾರತದಲ್ಲಿ 149 ರೂಪಾಯಿಗೆ ಲಭ್ಯವಿದೆ.
ಅಮೆರಿಕಾದಲ್ಲಿ ತಿಂಗಳ ಯೋಜನೆ ಬೆಲೆಯನ್ನು 1,039 ರೂಪಾಯಿಯಿಂದ 1,150 ರೂಪಾಯಿಗೆ ಹೆಚ್ಚಿಸಲಾಗಿದೆ. ಕೆನಡಾದಲ್ಲೂ ಬೆಲೆ ಹೆಚ್ಚಳವಾಗಿದೆ. ಕೆನಡಾದಲ್ಲಿ ಪ್ರೀಮಿಯಂ ಯೋಜನೆ ಬೆಲೆ 118 ರೂಪಾಯಿಯಂದ 1245 ರೂಪಾಯಿಯಾಗಿದೆ.
ಭಾರತದಲ್ಲಿ, ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್‌ನ ಬೆಲೆಯನ್ನು 199 ರೂಪಾಯಿಯಿಂದ 149 ರೂಪಾಯಿಗೆ ಇಳಿಸಲಾಗಿದೆ. ಮೊಬೈಲ್ ಪ್ಲಾನ್ ಬಳಕೆದಾರರಿಗೆ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ 480ಪಿ ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಒಪ್ಪಿಗೆ ನೀಡಲಾಗಿದೆ.