ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಸಮಯ ಕಳೆಯಲು ಮೊಬೈಲ್ ಮೊರೆ ಹೋಗಿದ್ದಾರೆ. ವಿಡಿಯೋ ಸ್ಟ್ರಿಮಿಂಗ್ ಅಪ್ಲಿಕೇಷನ್ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ನೆಟ್ ಫ್ಲಿಕ್ಸ್, ಅಮೆಜಾನ್ ವೀಕ್ಷಣೆ ಮಾಡುವವರು ಹೆಚ್ಚಾಗಿದ್ದಾರೆ.
ಒಬ್ಬರು ಇದ್ರ ಚಂದಾದಾರಿಕೆ ಪಡೆದ್ರೆ ನಾಲ್ಕೈದು ಮಂದಿ ಅದೇ ಪಾಸ್ವರ್ಡ್ ಹಾಕಿ, ತಮಗಿಷ್ಟವಾದ ವಿಡಿಯೋ ವೀಕ್ಷಣೆ ಮಾಡ್ತಿದ್ದಾರೆ. ಆದ್ರೆ ಶೀಘ್ರವೇ ಇದಕ್ಕೆ ಬ್ರೇಕ್ ಬೀಳಲಿದೆ. ಪಾಸ್ವರ್ಡ್ ಹಂಚಿಕೆ ತಪ್ಪಿಸಲು ಈ ಅಪ್ಲಿಕೇಷನ್ ಗಳು ಸ್ಟ್ರೀಮಿಂಗ್ ಅಪ್ಲಿಕೇಷನ್ ನಲ್ಲಿ ನವೀಕರಣ ಮಾಡಲು ಆಲೋಚನೆ ಮಾಡ್ತಿವೆ.
ಪಾಸ್ವರ್ಡ್ ಹಂಚಿಕೆಯಿಂದ ಕಂಪನಿಗಳು ಶತಕೋಟಿ ಡಾಲರ್ ನಷ್ಟ ಅನುಭವಿಸುತ್ತಿವೆ. ಮಾರ್ಚ್ ನಲ್ಲಿ ಕೆಲವು ನೆಟ್ಫ್ಲಿಕ್ಸ್ ಬಳಕೆದಾರರು ಖಾತೆಯನ್ನು ಪರಿಶೀಲಿಸಲು ಇ-ಮೇಲ್ ಅಥವಾ ಪಠ್ಯದ ಮೂಲಕ ಕೋಡ್ ನಮೂದಿಸಲು ಕೇಳಲಾಗಿತ್ತು. ಆದ್ರೆ ಈ ಪ್ರಕ್ರಿಯೆ ಯುಎಸ್ ನಲ್ಲಿ ಮಾತ್ರವೇ ಅಥವಾ ಬೇರೆಡೆಯೂ ಜಾರಿಗೆ ಬರಲಿದೆಯಾ ಎಂಬುದನ್ನು ನೆಟ್ಫ್ಲಿಕ್ಸ್ ಬಹಿರಂಗಪಡಿಸಲಿಲ್ಲ.
ವರದಿಯ ಪ್ರಕಾರ, ಐದು ವಯಸ್ಕರಲ್ಲಿ ಇಬ್ಬರು ತಮ್ಮ ಪಾಸ್ವರ್ಡನ್ನು ಕುಟುಂಬ ಸದಸ್ಯ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. 18 ರಿಂದ 29 ವರ್ಷ ವಯಸ್ಸಿನವರಲ್ಲಿ ಶೇಕಡಾ 56 ರಷ್ಟು ಜನರು ಪಾಸ್ವರ್ಡ್‌ಗಳನ್ನು ಹಂಚಿಕೊಳ್ಳುತ್ತಾರೆ.