
ಕೇವಲ 24 ವರ್ಷದವರಾಗಿದ್ದಾಗ, ಏಪ್ರಿಲ್ 22, 1921 ರಲ್ಲಿ ನೇತಾಜಿಯವರು ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗ್ ಅವರಿಗೆ ಈ ಪತ್ರ ಬರೆಯಲಾಗಿದೆ. ನೇತಾಜಿಯವರು, ಭಾರತೀಯ ಸಿವಿಲ್ ಸರ್ವಿಸ್‌ನಲ್ಲಿನ ಪ್ರೊಬೇಷನರ್ಗಳ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ ಮೊಂಟಾಗ್ ಅವ್ರನ್ನ ಕೇಳಿಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದರೆ, 100 ಪೌಂಡ್‌ಗಳ ಭತ್ಯೆಯನ್ನು ಭಾರತದ ಕಚೇರಿಗೆ ಹಿಂತಿರುಗಿಸುವುದಾಗಿಯು ಪತ್ರದಲ್ಲಿ ಬರೆದಿದ್ದಾರೆ.
ಭಾರತೀಯ ಸಿವಿಲ್ ಸರ್ವಿಸ್‌ನಲ್ಲಿನ ಪ್ರೊಬೇಷನರ್ಗಳ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕಲು ನಾನು ಬಯಸುತ್ತೇನೆ. ನಾನು ಇಲ್ಲಿಯವರೆಗೆ ನೂರು ಪೌಂಡ್‌ಗಳ ಭತ್ಯೆಯನ್ನು ಪಡೆದಿದ್ದೇನೆ, ನನ್ನ ರಾಜೀನಾಮೆಯನ್ನು ಸ್ವೀಕರಿಸಿದ ತಕ್ಷಣ ನಾನು ಭಾರತೀಯ ಕಚೇರಿಗೆ ಈ ಮೊತ್ತವನ್ನು ಕಳುಹಿಸುತ್ತೇನೆ. ಎಂದು ಬೋಸ್ ಪತ್ರದಲ್ಲಿ ಬರೆದಿದ್ದಾರೆ. 1920ರ ಆಗಸ್ಟ್ ನಲ್ಲಿ ನಡೆದ ಸ್ಪರ್ಧಾತ್ಮಕ ಐಸಿಎಸ್ ಪರೀಕ್ಷೆಯಲ್ಲಿ ನೇತಾಜಿಯವರು ನಾಲ್ಕನೇ ಸ್ಥಾನ ಪಡೆದಿದ್ದರು.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ನ್ಯಾಷನಲ್ ಆರ್ಕೈವ್ಸ್ ಇಂಡಿಯಾದಿಂದ ನೇತಾಜಿಯವರ ಮೂಲ ಪತ್ರದ ಪ್ರಿಂಟೆಡ್ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರವನ್ನು ಟ್ವೀಟ್ ಮಾಡಿರುವ ಕಸ್ವಾನ್, ಏಪ್ರಿಲ್ 22, 1921 ರಂದು ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಭಾರತೀಯ ನಾಗರಿಕ ಸೇವೆಗೆ ರಾಜೀನಾಮೆ ನೀಡಿದರು ಎಂದು ಬರೆದಿದ್ದಾರೆ.