ನೆಸ್ಲೆ ಇಂಡಿಯಾ, ಮಹಿಳೆಯರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ನೆಸ್ಲೆ ಇಂಡಿಯಾ, ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ನೆಸ್ಲೆ ಇಂಡಿಯಾ ದೊಡ್ಡ ಬದಲಾವಣೆ ಮಾಡಿದೆ. ಲಿಂಗ ಸಮಾನತೆ ತರುವ ನಿಟ್ಟಿನಲ್ಲಿ, ನೆಸ್ಲೆ ಇಂಡಿಯಾ, ಹೆಚ್ಚೆಚ್ಚು ಮಹಿಳೆಯರ ನೇಮಕಕ್ಕೆ ಮುಂದಾಗಿದೆ.
ನೆಸ್ಲೆ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ತಮ್ಮ ಕಂಪನಿಯಲ್ಲಿ ಶೇಕಡಾ 23 ರಷ್ಟು ಉದ್ಯೋಗಿಗಳಿದ್ದಾರೆ ಎಂದು ಅವರು ಹೇಳಿದ್ದಾರೆ. 2015 ರಲ್ಲಿ ನೆಸ್ಲೆ ಇಂಡಿಯಾಕ್ಕೆ ಬಂದಾಗ, ಶೇಕಡಾ 15 ರಿಂದ 16ರಷ್ಟು ಮಹಿಳೆಯರಿದ್ದರಂತೆ. ಈಗ ಅದನ್ನು ಶೇಕಡಾ 23ಕ್ಕೆ ಹೆಚ್ಚಿಸಲಾಗಿದೆ ಎನ್ನಲಾಗಿದೆ.
ನೆಸ್ಲೆ ಇಂಡಿಯಾ ದೇಶದಲ್ಲಿ ಎಂಟು ಸ್ಥಾವರಗಳನ್ನು ಹೊಂದಿದ್ದು, ಶೀಘ್ರದಲ್ಲೇ ಇದು 9 ಆಗಲಿದೆ ಎಂದು ಅವರು ಹೇಳಿದ್ದಾರೆ. ನೆಸ್ಲೆ ಇಂಡಿಯಾ ಇದುವರೆಗೆ ತನ್ನ ಎಲ್ಲಾ ಸ್ಥಾವರಗಳಲ್ಲಿ ಸುಮಾರು 300 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಮುಂಬರುವ 4 ವರ್ಷಗಳಲ್ಲಿ ಸುಮಾರು 2,600 ಕೋಟಿ ರೂಪಾಯಿಯಾಗಲಿದೆ ಎಂದು ಅವರು ಹೇಳಿದ್ದಾರೆ.