ವೆನಿಲ್ಲಾ ಹಾಗೂ ಚಾಕಲೇಟ್ನಿಂದ ಮಾಡಲ್ಪಟ್ಟ ಕುಕ್ಕಿ ಚಾಕಲೇಟ್ಗಳು ಕಳೆದ 60 ವರ್ಷಗಳಿಂದ ಚಿಲಿ ದೇಶದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿತ್ತು. ಆದರೆ ನೆಗ್ರಿಟೋ ಎಂದರೆ ಚಿಕ್ಕ ಕಪ್ಪು ವ್ಯಕ್ತಿ ಎಂಬ ಅರ್ಥವನ್ನ ಹೊಂದಿದೆ ಎಂಬ ಕಾರಣಕ್ಕೆ ಇದೀಗ 60 ವರ್ಷಗಳ ಹಿಂದಿನ ತನ್ನ ಹೆಸರನ್ನ ಬದಲಾಯಿಸಿಕೊಂಡಿದೆ.
ನೆಗ್ರಿಟೋ ಅಥವಾ ನೆಗ್ರಿಟಾ ಸ್ತ್ರೀ ಆವೃತ್ತಿಗಳಾ ಗೋರ್ಡೊ ಅಥವಾ ಗೋರ್ಡಾ ಇವೆಲ್ಲ ಶಬ್ದಗಳನ್ನ ಲ್ಯಾಟಿನ್ ಅಮೆರಿಕದಂತಹ ದೇಶಗಳಲ್ಲಿ ಕಪ್ಪು ಬಣ್ಣದ ಸಣ್ಣ ವ್ಯಕ್ತಿ ಎಂಬ ಅರ್ಥವನ್ನ ಹೊಂದಿದೆ ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ನೆಸ್ಲೆ ಕಂಪನಿ, ಈ ರೀತಿಯ ಹೆಸರು ತಾರತಮ್ಯಕ್ಕೆ ಕಾರಣವಾಗುತ್ತಿದೆ ಎಂಬುದು ಗಮನಕ್ಕೆ ಬಂದ ಬಳಿಕ 60 ವರ್ಷಗಳಿಂದ ನೆಗ್ರಿಟಾ ಎಂಬ ಹೆಸರನ್ನ ಹೊಂದಿದ್ದ ಈ ಕುಕ್ಕೀಸ್ಗಳು ಇನ್ಮುಂದೆ ಚೋಕಿಟಾ ಎಂಬ ಹೆಸರಿನ ಮೂಲಕ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ.