ಮ್ಯಾಗಿ ಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮ್ಯಾಗಿ ಸೇರಿದಂತೆ ನೆಸ್ಲೆಯ ಶೇಕಡಾ 60ರಷ್ಟು ಉತ್ಪನ್ನಗಳು ಆರೋಗ್ಯಕರವಾಗಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಯೋಗ ಗುರು ಬಾಬಾ ರಾಮ್ದೇವ್ ಅಥವಾ ಯಾವುದೇ ಪ್ರತಿಸ್ಪರ್ಧಿ ಕಂಪನಿ ಈ ಬಗ್ಗೆ ಆರೋಪ ಮಾಡ್ತಿಲ್ಲ. ವಿಶ್ವದ ಅತಿದೊಡ್ಡ ಆಹಾರ ಮತ್ತು ಪಾನೀಯ ಕಂಪನಿಗಳಲ್ಲಿ ಒಂದಾದ ನೆಸ್ಲೆ ತನ್ನ ವರದಿಯಲ್ಲಿ ಈ ವಿಷ್ಯ ಬಹಿರಂಗಪಡಿಸಿದೆ.
ಫೈನಾನ್ಷಿಯಲ್ ಟೈಮ್ಸ್ ಈ ಬಗ್ಗೆ ದೊಡ್ಡ ವರದಿಯನ್ನು ಮಾಡಿದೆ. ಈ ಆಘಾತಕಾರಿ ವರದಿಯಲ್ಲಿ ಶೇಕಡಾ 60ರಷ್ಟು ಉತ್ಪನ್ನಗಳು ಆರೋಗ್ಯಕ ವಿಭಾಗದಲ್ಲಿ ಬರುವುದಿಲ್ಲವೆಂದು ನೆಸ್ಲೆ ಹೇಳಿದೆ. ನೆಸ್ಲೆ ತನ್ನ ಉತ್ಪನ್ನಗಳಲ್ಲಿ ಪೋಷಕಾಂಶ ಹೆಚ್ಚಿಸುವ ಕೆಲಸ ಮಾಡ್ತಿದೆ. ಶೇಕಡಾ 60ರಷ್ಟು ಉತ್ಪನ್ನಗಳು ಆರೋಗ್ಯಕರವಾಗಿಲ್ಲ. ಕೆಲವೊಂದು ಉತ್ಪನ್ನಗಳಲ್ಲಿ ಎಷ್ಟು ಬದಲಾವಣೆ ಮಾಡಿದರೂ ಅವು ಆರೋಗ್ಯಕರವಾಗಿರುವುದಿಲ್ಲವೆಂಬುದನ್ನು ಒಪ್ಪಿಕೊಂಡಿದೆ.
ನೆಸ್ಲೆ, ಮ್ಯಾಗಿ, ಕಿಟ್ ಕ್ಯಾಟ್, ನೆಸ್ಕ್ಯಾಪೆ ಸೇರಿದಂತೆ ಅನೇಕ ಉತ್ಪನ್ನಗಳನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಮಾರಾಟ ಮಾಡ್ತಿದೆ. ತನ್ನ ಕೆಲ ಉತ್ಪನ್ನಗಳು ಮೊದಲಿನಿಂದಲೂ ಆರೋಗ್ಯಕರವಾಗಿರಲಿಲ್ಲ. ಅವುಗಳನ್ನು ಆರೋಗ್ಯಕರವಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ತನ್ನ ರೂಪುರೇಷೆಯನ್ನೇ ಬದಲಿಸುವ ಆಲೋಚನೆಯಲ್ಲಿದೆ ನೆಸ್ಲೆ. ಸದ್ಯ ನೆಸ್ಲೆ ತನ್ನ ಉತ್ಪನ್ನಗಳಲ್ಲಿ ಸುಧಾರಣೆ ತಂದಿದೆ. ಕಳೆದ 7 ವರ್ಷಗಳಲ್ಲಿ ಉತ್ಪನ್ನಗಳಲ್ಲಿರುವ ಸಕ್ಕರೆ ಹಾಗೂ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಕಂಪನಿ ಹೇಳಿದೆ.