
ಕಠ್ಮಂಡು: ನೇಪಾಳದಲ್ಲಿ ಭಾರಿ ಮಳೆ, ಭೂ ಕುಸಿತದಿಂದಾಗಿ ಜನರು ತತ್ತರಿಸಿ ಹೋಗಿದ್ದು, ಜನಜೀವನ ಅಯೋಮಯವಾಗಿದೆ. ಒಂದೆಡೆ ವರುಣಾರ್ಭಟ, ಇನ್ನೊಂದೆಡೆ ಭೀಕರ ಪ್ರವಾಹದಿಂದಾಗಿ ಮನೆ, ಮಠ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜನರು ಬೀದಿಗೆ ಬಿದ್ದಿದ್ದಾರೆ.
ನೇಪಾಳದ ಹಲವೆಡೆ ಭಾರಿ ಮಳೆ, ಭೂಕುಸಿತದಿಂದಾಗಿ 99 ಜನರು ಸಾವನ್ನಪ್ಪಿದ್ದಾರೆ. ಭೂ ಕುಸಿತ ದುರಂತದಲ್ಲಿ 69 ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೂ ಕುಸಿತ, ಪ್ರವಾಹದಿಂದಾಗಿ ಹಲವರು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಕಠ್ಮಂಡು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಸಂತ್ರಸ್ತರನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ.