ಮುಜಾಫರ್ ನಗರ: ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ಮಾವ ತನ್ನ 26 ವರ್ಷದ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಹಿನ್ನೆಲೆ ಪತಿ ಆಕೆಯನ್ನು ಥಳಿಸಿ ಮನೆಯಿಂದ ಹೊರಕ್ಕೆ ಹಾಕಿದ್ದಾರೆ.
ಪತ್ನಿಯನ್ನು ಮನೆಯಿಂದ ಹೊರಹಾಕುವಾಗ ಪತಿ ‘ ನನ್ನ ತಂದೆ ನಿಮ್ಮೊಂದಿಗೆ ಬಲವಂತವಾಗಿ ಸಂಬಂಧ ಹೊಂದಿದ್ದಾರೆ, ನೀವು ನನ್ನ ತಂದೆಯ ಹೆಂಡತಿ ಮತ್ತು ನನ್ನ ‘ಅಮ್ಮಿ’ (ತಾಯಿ) ಆಗಿರುವುದರಿಂದ ನಾನು ನಿಮ್ಮೊಂದಿಗೆ ವಾಸಿಸಲು ಆಗಲ್ಲ ಎಂದಿದ್ದಾನೆ.ಪತಿ ಮನೆಯಲ್ಲಿ ಇಲ್ಲದಿದ್ದಾಗ ಮಾವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ . ಅಲ್ಲದೇ ಮಾವ ಬೆದರಿಕೆಯೊಡ್ಡಿ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಮಹಿಳೆಯ ಮಾವ ಮತ್ತು ಪತಿಯ ವಿರುದ್ಧ ಸೆಕ್ಷನ್ 376 (ಲೈಂಗಿಕ ದೌರ್ಜನ್ಯ), ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವನ್ನುಂಟುಮಾಡುವ ಶಿಕ್ಷೆ) ಮತ್ತು ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಾವ ಮತ್ತು ಪತಿಯ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಅಧಿಕೃತ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ರವೀಂದರ್ ಯಾದವ್ ತಿಳಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 164 ರ ಪ್ರಕಾರ ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಅಧಿಕೃತವಾಗಿ ದಾಖಲಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.