
ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕಾಶ್ಮೀರದಲ್ಲಿ ಗಲಭೆ ನಿಂತಿದೆ ಕರುನಾಡಲ್ಲಿ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪೆಟ್ರೋಲ್ ಬಾಂಬ್, ಲಾಂಗು, ಮಚ್ಚು, ರಾಡ್‌ಗಳ ಸಕಲ ಸಿದ್ಧತೆ ಮಾಡಿಕೊಂಡೇ ಮತಾಂಧ ಕಿಡಿಗೇಡಿಗಳು ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚಿ ಧ್ವಂಸ ಮಾಡಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಇದು ಕರ್ನಾಟಕದಲ್ಲಿ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇವರ ಮಾರ್ಗದರ್ಶಕ ಮಂದ ಬುದ್ದಿಯ ಬಾಲಕ “ಮೊಹಬ್ಬತ್ ಕಿ ದುಕಾನ್” ಸೃಷ್ಟಿಕರ್ತ ರಾಹುಲ್ ಗಾಂಧಿ ಅವರ ಕೊಡುಗೆ ಎಂದು ಗುಡುಗಿದೆ.
ಹಿಂದೂಗಳು ಆಸ್ತಿಪಾಸ್ತಿ ನಷ್ಟದಿಂದ ಕಣ್ಣೀರು ಹಾಕುತ್ತಿದ್ದರೆ, ಅನ್‌ಫಿಟ್ ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಇದೊಂದು ಸಣ್ಣ ಘಟನೆ ಗಲಭೆ ಅಲ್ಲ ಎನ್ನುವ ಮೂಲಕ ಇನ್ನೂ ತುಷ್ಟೀಕರಣ ಮಾಡಿ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.