
ಬೆಂಗಳೂರು: ಲಾರಿಯಿಂದ ರೋಡ್ ರೋಲರ್ ಅನ್ ಲೋಡ್ ಮಾಡುವಾಗ ದುರಂತ ಸಂಭವಿಸಿದೆ. ರೋಡ್ ರೋಲರ್ ಚಾಲಕನ ನಿರ್ಲಕ್ಷದಿಂದ ಲಾರಿ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ. ಬೂದಿಹಾಳ ಸಮೀಪ ಖಾಸಗಿ ಕಂಪನಿಯಲ್ಲಿ ದುರ್ಘಟನೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೂದಿಹಾಳ ಬಳಿ ಘಟನೆ ನಡೆದಿದ್ದು, ಮೈಸೂರು ಮೂಲದ ಲಾರಿ ಕ್ಲೀನರ್ 46 ವರ್ಷದ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೋಡ್ ರೋಲರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.